ವಾಣಿಜ್ಯ

ಪೆಟ್ರೋಲ್ ದರದಲ್ಲಿ 3.77 ರು, ಹಾಗೂ ಡೀಸೆಲ್ ದರ 2.91ರು ಇಳಿಕೆ

Srinivasamurthy VN

ನವದೆಹಲಿ: ಸತತ ಎರಡೂವರೆ ತಿಂಗಳುಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಕಂಡುಬಂದಿದ್ದು, ಪೆಟ್ರೋಲ್ ದರ ಪ್ರತೀ ಲೀಟರ್ ಗೆ 3.77 ರು. ಮತ್ತು ಡೀಸೆಲ್ ದರದಲ್ಲಿ 2.91 ರು ಇಳಿಕೆಯಾಗಿದೆ.

ಶುಕ್ರವಾರ ಮಧ್ಯರಾತ್ರಿಯಿಂದಲೇ ನೂತನ ದರಗಳ ಜಾರಿಗೆ ಬಂದಿದ್ದು, ಕರ್ನಾಟಕದಲ್ಲಿನ ತೆರಿಗೆ ಇಳಿಕೆಯಿಂದಾಗಿ ಪೆಟ್ರೋಲ್ ದರ ಕಡಿತ 4 ರುಗಳವರೆಗೂ ಆಗಲಿದೆ ಎಂದು ತಿಳಿದುಬಂದಿದೆ. ಆಯಾ ರಾಜ್ಯ ಸರ್ಕಾರಗಳು  ಮಾಡುವ ತೆರಿಗೆ ಇಳಿಕೆ ಮೇರೆಗೆ ದರ ಕಡಿತ ಪ್ರಮಾಣ ಹೆಚ್ಚೂ ಕಡಿಮೆಯಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸ್ಪಷ್ಟಪಡಿಸಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಇಂಧನ ವಹಿವಾಟಿನ ವಿನಿಮಯ ದರ ಇಳಿಕೆಯಾದ ಪರಿಣಾಮ ತೈಲ ದರ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಜನವರಿ 16ರಂದು ಪೆಟ್ರೋಲ್ ದರದಲ್ಲಿ 54 ಪೈಸಿ ಏರಿಕೆ  ಮತ್ತು ಡೀಸೆಲ್ ದರ 1.20 ರು ಏರಿಕೆಯಾಗಿತ್ತು.

SCROLL FOR NEXT