ಮುಂಬೈ: ವಾರಕ್ಕೊಮ್ಮೆ ಮುಂಬೈ ಮತ್ತು ಕರಾಚಿ ಮಧ್ಯ ಸಂಚರಿಸುತ್ತಿರುವ ವಿಮಾನಯಾನ ಸೇವೆಯನ್ನು ಮೇ 11ರಿಂದ ರದ್ದುಗೊಳಿಸಿರುವುದಾಗಿ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನಯಾನ(ಪಿಐಎ) ಸಂಸ್ಥೆ ಹೇಳಿದೆ.
ಕರಾಚಿ-ಮುಂಬೈ ವಿಮಾನದ ಬುಕ್ಕಿಂಗ್ ಅನ್ನು ಮೇ 11ರಿಂದ ಸ್ಥಗಿತಗೊಳಿಸುವಂತೆ ಮುಂಬೈ ವಿಮಾನ ನಿಲ್ದಾಣದ ಸಂಬಂಧಪಟ್ಟ ಅಧಿಕಾರಿಗಳಿಗೆ ಪಿಐಎ ಸೂಚಿಸಲಾಗಿದೆ ಎಂದು ಪಟಿಐ ವರದಿ ಮಾಡಿದೆ.
ಪಿಐಎ ಯಾವ ಕಾರಣಕ್ಕಾಗಿ ಕರಾಚಿ-ಮುಂಬೈ ವಿಮಾನ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿದೆ.