ವಾಣಿಜ್ಯ

ಐಟಿ ಉದ್ಯಮ ಶೇ.8-9ರಷ್ಟು ಬೆಳವಣಿಗೆ, ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಇಲ್ಲ: ಸರ್ಕಾರ

Lingaraj Badiger
ನವದೆಹಲಿ: ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದ ಉದ್ದೋಗ ಕಡಿತ ಮಾಡುತ್ತಿಲ್ಲ ಎಂದು ಮಂಗಳವಾರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಐಟಿ ಉದ್ಯಮ ಶೇ.8ರಿಂದ 9ರಷ್ಟು ಅಭಿವೃದ್ಧಿ ದಾಖಲಿಸಿದೆ ಎಂದು ಹೇಳಿದೆ.
ಕೆಲವು ಪ್ರಕರಣಗಳಲ್ಲಿ ಉದ್ಯೋಗಿಗಳ ವಾರ್ಷಿಕ ಒಪ್ಪಂದವನ್ನು ನವೀಕರಿಸಿಲ್ಲ. ಇದರ ಹೊರತಾಗಿ ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಮಾಡಿಲ್ಲ ಎಂದು ಐಟಿ ಕಾರ್ಯದರ್ಶಿ ಅರುಣಾ ಸುಂದರರಾಜನ್ ಅವರು ಹೇಳಿದ್ದಾರೆ.
ಬೃಹತ್ ಐಟಿ ಸೇವಾ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ಆರಂಭಿಸಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅರುಣಾ ಅವರು ಈ ಪ್ರತಿಕ್ರಿಯೆ ನೀಡಿದ್ದು, ಅದು ಕೇವಲ ವಾರ್ಷಿಕ ಅಪ್ರೈಸಲ್ ಭಾಗವಾಗಿ ಕೆಲವು ನೌಕರರ ಒಪ್ಪಂದವನ್ನು ನವೀಕರಿಸದೆ ಇರುಬಹುದು. ಆದರೆ ಇದ್ದಕ್ಕಿದ್ದಂತೆ ಈ ವರ್ಷ ಅತಿ ಹೆಚ್ಚು ಉದ್ಯೋಗ ಕಡಿತಗೊಳಿಸಲಾಗಿದೆ ಎಂದು ಭಾವಿಸುವುದು ತಪ್ಪಾಗುತ್ತದೆ ಎಂದಿದ್ದಾರೆ.
ಐಟಿ ಉದ್ಯಮ ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿಲ್ಲ. ಹೀಗಾಗಿ ಕಂಪನಿಗಳ ವಹಿವಾಟು ಕುಂಠಿತಗೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತಗೊಳಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. 
SCROLL FOR NEXT