ವಾಣಿಜ್ಯ

ಮೊದಲ ಬಾರಿಗೆ 9,500 ಅಂಕಗಳ ಗಡಿ ದಾಟಿದ ನಿಫ್ಟಿ

Sumana Upadhyaya
ಮುಂಬೈ: ರಾಷ್ಟ್ರೀಯ ಷೇರು ಮಾರುಕಟ್ಟೆಯ ಇಂದು ಅಪರಾಹ್ನದ ವಹಿವಾಟು ವೇಳೆ ಷೇರು ಸಂವೇದಿ ಸೂಚ್ಯಂಕ 9,500 ಅಂಕಗಳನ್ನು ದಾಟಿ ದಾಖಲೆ ಕಂಡಿದೆ.
ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಿಫ್ಟಿ 9,503.50 ಅಂಕಗಳಲ್ಲಿ ವಹಿವಾಟು ನಡೆಸಿತು. 58.10 ಅಂಕಗಳು ಅಥವಾ ಶೇಕಡಾ 0.62ರಷ್ಟು ಏರಿಕೆ ಕಂಡುಬಂತು.
ಮಾರುಕಟ್ಟೆ ವೀಕ್ಷಕರ ಪ್ರಕಾರ, ಜಾಗತಿಕ ಮಟ್ಟದಲ್ಲಿ ಧನಾತ್ಮಕ ಜಾಗತಿಕ ಸೂಚನೆಗಳು,ಆರೋಗ್ಯಕರ ಆರ್ಥಿಕ ದತ್ತಾಂಶ ಮತ್ತು ಸಾಮಾನ್ಯ ಮಾನ್ಸೂನ್ ನಿರೀಕ್ಷೆಗಳಿಂದಾಗಿ ಭಾರತದ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಇಂದು ದಾಖಲೆ ಕಂಡಿತು.
ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 30 ಅಂಕಗಳಷ್ಟು ಏರಿಕೆ ಕಂಡುಬಂದು 30,000 ಗಡಿ ದಾಟಿದೆ. 2.10ರ ಹೊತ್ತಿಗೆ ಅದು 30,545.01 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು. 222.89 ಅಂಕಗಳಷ್ಟು ಅಥವಾ ಶೇಕಡಾ 0.74 ಅಂಕ ಏರಿಕೆ ಕಂಡುಬಂತು.
SCROLL FOR NEXT