ಆಪರೇಶನ್ ಕ್ಲೀನ್ ಮನಿ ವೆಬ್ ಸೈಟ್ ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದರು. 
ವಾಣಿಜ್ಯ

ತೆರಿಗೆ ವಂಚಕರನ್ನು ಗುರುತಿಸಿ ವರ್ಗೀಕರಿಸುವ ಆಪರೇಶನ್ ಕ್ಲೀನ್ ಮನಿ ವೆಬ್ ಸೈಟ್ ಗೆ ಚಾಲನೆ

ಕಪ್ಪು ಹಣ ಮತ್ತು ತೆರಿಗೆ ಕಟ್ಟದಿರುವ ಹಣದ ವಿರುದ್ಧ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ತೆರಿಗೆ ಇಲಾಖೆ ದಾಳಿ ನಡೆಸಿರುವ...

ನವದೆಹಲಿ:  ಕಪ್ಪು ಹಣ ಮತ್ತು ತೆರಿಗೆ ಕಟ್ಟದಿರುವ ಹಣದ ವಿರುದ್ಧ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ತೆರಿಗೆ ಇಲಾಖೆ ದಾಳಿ ನಡೆಸಿರುವ ವರದಿಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ. ತೆರಿಗೆ ವಂಚಕರ ಹೆಸರುಗಳನ್ನು ಕೂಡ ವಿವಿಧ ವರ್ಗಗಳಲ್ಲಿ  ಪ್ರಕಟಿಸಲಿದೆ.
ಇಂತಹ ವ್ಯವಸ್ಥೆಯನ್ನೊಳಗೊಂಡ ಆಪರೇಶನ್ ಕ್ಲೀನ್ ಮನಿ ವೆಬ್ ಸೈಟ್ ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದರು.
ಅಧಿಕ ನಗದು ಹೊಂದಿರುವುದು ಮತ್ತು ತೆರಿಗೆ ಪಾವತಿಸದ ಹಣ ಸುರಕ್ಷಿತವಲ್ಲ ಎಂದು ಜೇಟ್ಲಿ ಹೇಳಿದರು. ಪ್ರಸ್ತುತ ದೇಶದಲ್ಲಿ 91 ಲಕ್ಷ ಜನ ತೆರಿಗೆ ಪಾವತಿಸುತ್ತಿದ್ದು, ಈ ಸಂಖ್ಯೆ ಮುಂದಿನ ವರ್ಷ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ತೆರಿಗೆ ಕಟ್ಟದಿರುವ ದೂರುಗಳಿಗಿಂತ ತೆರಿಗೆ ಪಾವತಿದಾರರಾಗಿ ಜನರನ್ನು ಪರಿವರ್ತಿಸುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಅಧ್ಯಕ್ಷ ಸುಶಿಲ್ ಚಂದ್ರ ತಿಳಿಸಿದ್ದಾರೆ.
ತೆರಿಗೆ ವಂಚನೆ ದಾಳಿಗೆ ಸಂಬಂಧಪಟ್ಟಂತೆ ನಡೆಸಲಾದ ದಾಳಿಗಳ ಬಗ್ಗೆ ಆದಾಯ  ತೆರಿಗೆ ಇಲಾಖೆ ವರದಿಗಳನ್ನು ಪ್ರಕಟಿಸಲಿದೆ. ವೆಬ್ ಸೈಟ್ ನಲ್ಲಿ ಎಲ್ಲಾ ವಿವರಗಳು ದೊರಕಲಿದ್ದು ತೆರಿಗೆ ವಂಚಕರನ್ನು ಗುರುತಿಸಲಾಗುತ್ತದೆ.
ಅತಿ ಅಪಾಯಕಾರಿ, ಮಧ್ಯಮ ಅಪಾಯಕಾರಿ, ಕಡಿಮೆ ಮತ್ತು ಅತಿ ಕಡಿಮೆ ಅಪಾಯಕಾರಿ ಎಂದು ವಿವಿಧ ವರ್ಗಗಳಲ್ಲಿ ತೆರಿಗೆ ವಂಚಕರನ್ನು ವಿಭಾಗಿಸಲಾಗುವುದು.
ಅತಿ ಹೆಚ್ಚು ಅಪಾಯಕಾರಿ ವ್ಯಕ್ತಿಗಳು, ಸಂಘ-ಸಂಸ್ಥೆಗಳ ವಿರುದ್ಧ ದಾಳಿ, ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ನೇರ ವಿಚಾರಣೆಗಳು ನಡೆಯುತ್ತವೆ.ಮಧ್ಯಮ ಅಪಾಯಕಾರಿಗಳಿಗೆ ಸಂದೇಶಗಳು ಅಥವಾ ಇಮೇಲ್ ಮೂಲಕ ಮಾಹಿತಿ ಕಳುಹಿಸಿ ತಿದ್ದಿಕೊಳ್ಳುವಂತೆ ಸೂಚಿಸುತ್ತೇವೆ ಮತ್ತು ಕಡಿಮೆ ಹಾಗೂ ಅತಿ ಕಡಿಮೆ ಅಪಾಯಕಾರಿ ತೆರಿಗೆ ವಂಚಕರನ್ನು ಗಮನಿಸಲಾಗುತ್ತದೆ.
ಇಲ್ಲಿ ತೆರಿಗೆ ವಂಚಕ ವ್ಯಕ್ತಿಗಳು ಅಥವಾ ಸಂಸ್ಥೆಗಳ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT