ಸಾಂದರ್ಭಿಕ ಚಿತ್ರ 
ವಾಣಿಜ್ಯ

ದೇಶದ ಉದ್ಯೋಗಗಳಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯಿಂದ ಆರ್ಥಿಕಾಭಿವೃದ್ಧಿ: ವಿಶ್ವ ಬ್ಯಾಂಕ್

ಮಹಿಳಾ ನೌಕರರ ಸಂಖ್ಯೆ ಹೆಚ್ಚಾದರೆ ಭಾರತದ ಆರ್ಥಿಕತೆ ದ್ವಿಗುಣಗೊಳ್ಳುವ ಸಾಧ್ಯತೆಯಿದೆ...

ನವದೆಹಲಿ: ಮಹಿಳಾ ನೌಕರರ ಸಂಖ್ಯೆ ಹೆಚ್ಚಾದರೆ ಭಾರತದ ಆರ್ಥಿಕತೆ ದ್ವಿಗುಣಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.
ಆರ್ಥಿಕ ಸುಧಾರಣೆಯಿಂದ ಪ್ರತಿ ಮನೆಗಳಲ್ಲಿನ ಆದಾಯ ವೃದ್ಧಿಯಾಗಲಿದ್ದು ಬಡತನ ಕಡಿಮೆಯಾಗುತ್ತದೆ. ಅಲ್ಲದೆ ಮುಂದಿನ ಜನಾಂಗದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮತ್ತ ಆರೋಗ್ಯ ಸೇವೆ ನೀಡಬಹುದು ಎಂದು ಹೇಳಿದೆ.
ಏಷ್ಯಾ ಖಂಡದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ ದೇಶವಾಗಿರುವ ಭಾರತ ಕಳೆದ ಮೂರು ವರ್ಷಗಳಲ್ಲಿ ಸುಮಾರು ಶೇಕಡಾ 7ರ ಆಸುಪಾಸಿನಲ್ಲಿ ಬೆಳವಣಿಗೆ ಹೊಂದುತ್ತಿದೆ. ಯೋಜನಾ ನಿರೂಪಕರು ಚೀನಾದ ಆರ್ಥಿಕ ಬೆಳವಣಿಗೆಯ ರೀತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ಬಡತನ ನಿರ್ಮೂಲನವಾಗುವುದಲ್ಲದೆ ತಲಾ ಆದಾಯ ಹೆಚ್ಚಾಗುತ್ತದೆ ಎಂದು ವರದಿ ಹೇಳುತ್ತದೆ.
ಮಹಿಳಾ ನೌಕರರ ಸಂಖ್ಯೆ ಭಾರತದಲ್ಲಿ 2011-12ರಲ್ಲಿ ಶೇಕಡಾ 22ಕ್ಕೆ ಕುಸಿಯಿತು. ಅದು ಇಡೀ ವಿಶ್ವದಲ್ಲಿಯೇ ಅತ್ಯಂತ ಕಡಿಮೆಯಾಗಿದ್ದು, 2000ನೇ ಇಸವಿ ಸುಮಾರಿಗೆ ಮಹಿಳಾ ನೌಕರರ ಸಂಖ್ಯೆ ಶೇಕಡಾ 40ರಷ್ಟಿತ್ತು.
15ರಿಂದ 24 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶದಿಂದಾಗಿ ಮಹಿಳಾ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಭಾರತಕ್ಕೆ ಸಾಕಷ್ಟು ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಾಗದಿರುವುದು ಕೂಡ ಆರ್ಥಿಕತೆ ಹಿಂದುಳಿಯಲು ಇನ್ನೊಂದು ಕಾರಣವಾಗಿದೆ.
ಭಾರತೀಯ ಮಹಿಳೆಯರಲ್ಲಿ ಮೂವರಲ್ಲಿ ಇಬ್ಬರು ಪದವೀಧರರು ಉದ್ಯೋಗವನ್ನು ಹೊಂದಿರುವುದಿಲ್ಲ. ಭಾರತದಲ್ಲಿ ಶಿಕ್ಷಣವಂತ ಪದವಿ ಪಡೆದ ಮಹಿಳೆಯರ ನಿರುದ್ಯೋಗ ಪ್ರಮಾಣ ಬಾಂಗ್ಲಾದೇಶ, ಇಂಡೋನೇಷಿಯಾ ಮತ್ತು ಬ್ರೆಜಿಲ್ ಗಿಂತ ಹೆಚ್ಚಾಗಿದೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ಹೇಳಿದೆ.
ಬಾಂಗ್ಲಾದೇಶದಂತೆ ಭಾರತ ಸರ್ಕಾರ ಮಹಿಳಾ ಮತ್ತು ಕಾರ್ಮಿಕರನ್ನು ಹೆಚ್ಚಿಸುವ ಬೆಳವಣಿಗೆ ತಂತ್ರಗಳನ್ನು ಅನುಸರಿಸಬೇಕು. ಮಹಿಳೆಯರಿಗೆ ಹೆಚ್ಚಿನ ಉದ್ಯೋಗ, ಸ್ವಾವಲಂಬನೆ ಬದುಕಿಗೆ ದಾರಿ ಮಾಡಿಕೊಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಕೌಶಲಾಭಿವೃದ್ಧಿ, ಸ್ವ ಉದ್ಯೋಗ ಸೃಷ್ಟಿಗೆ ಸಬ್ಸಿಡಿಸಹಿತ ಸಾಲ ಯೋಜನೆಯನ್ನು ತಂದಿದೆ. ಅವರು ಸುಮಾರು 1 ಶತಕೋಟಿ ಡಾಲರ್ ಪ್ಯಾಕೇಜ್ ನ್ನು ಜವಳಿ ವಲಯಕ್ಕೆ ಬಿಡುಗಡೆ ಮಾಡಿದ್ದು ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸಿದ್ದಾರೆ.
ಮಹಿಳಾ ನೌಕರರಿಗೆ ಕೆಲಸದಲ್ಲಿ ನಮ್ಯತೆಯನ್ನು ತರಲು ಭಾರತ ಸರ್ಕಾರ ಇತ್ತೀಚೆಗೆ ಮಹಿಳೆಯರ ಹೆರಿಗೆ ರಜೆಯನ್ನು ದ್ವಿಗುಣಗೊಳಿಸಿದೆ. ಮಹಿಳಾ ನೌಕರರಿಗೆ ಮನೆಯಿಂದಲೇ ಕಚೇರಿ ಕೆಲಸ ಮಾಡುವ ಸೌಲಭ್ಯ ಕೂಡ ಕೆಲವು ಕಂಪೆನಿಗಳಲ್ಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT