ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಆರ್ ಬಿಐನಿಂದ ಶೀಘ್ರ 1 ರುಪಾಯಿ ಹೊಸ ನೋಟ್ ಬಿಡುಗಡೆ

ಕಳೆದ ವರ್ಷ ನವೆಂಬರ್ ನಲ್ಲಿ ಹಳೆ 500 ಹಾಗೂ 1000 ರುಪಾಯಿ ನೋಟುಗಳನ್ನು ನಿಷೇಧಿಸಿ ಹೊಸ 500 ಹಾಗೂ 2000....

ಸಾಂದರ್ಭಿಕ ಚಿತ್ರ
Lingaraj Badiger
Updated On : 31 May 2017, 10:40 am
ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ ಹಳೆ 500 ಹಾಗೂ 1000 ರುಪಾಯಿ ನೋಟುಗಳನ್ನು ನಿಷೇಧಿಸಿ ಹೊಸ 500 ಹಾಗೂ 2000 ರುಪಾಯಿ ನೋಟುಗಳನ್ನು ಬಿಡುಗಡೆ ಮಾಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ)  ಇದೀಗ ಹೊಸ 1 ರುಪಾಯಿ ನೋಟುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಹಳೆಯ 1 ರುಪಾಯಿ ನೋಟಿಗಿಂತ ಇದು ಅತ್ಯಂತ ಭಿನ್ನವಾಗಿರಲಿದೆ. ಬಣ್ಣ ಮತ್ತು ವಿನ್ಯಾಸದಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗುತ್ತದೆ. ಹೊಸ 1 ರೂಪಾಯಿಯ ನೋಟಿನ ಮೇಲೆ ಸಾಗರ್ ಸಾಮ್ರಾಟ್ ತೈಲ ಪರಿಶೋಧನಾ ಘಟಕದ ಚಿತ್ರವನ್ನು ಮುದ್ರಿಸಲಾಗುವುದು ಎಂದು ಆರ್ ಬಿಐ ತಿಳಿಸಿದೆ.
ಹೊಸ ಒಂದು ರುಪಾಯಿ ನೋಟು ಗುಲಾಬಿ ಮತ್ತು ಹಸಿರು ಬಣ್ಣಗಳ ಕಾಂಬಿನೇಷನ್ ಹೊಂದಿರಲಿದೆ. 1 ಎಂಬ ಅಂಕಿಯನ್ನು 15 ಭಾಷೆಗಳಲ್ಲಿ ನೋಟಿನ ಮೇಲೆ ಮುದ್ರಿಸಲಾಗವುದು ಎಂದು ಆರ್ ಬಿಐ ಹೇಳಿದೆ.

Advertisement

Advertisement

ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧದ ಘೋಷಣೆ ಮಾಡಿದ್ದರು. ನಂತರ ಸರ್ಕಾರ ಜಾಗತಿಕ ಸ್ಟ್ಯಾಂಡರ್ಡ್ ಹಾಗೂ ವಿಶಿಷ್ಟ ಸೆಕ್ಯೂರಿಟಿ ಫೀಚರ್ ಹೊಂದಿರುವ 500 ಮತ್ತು 2000 ರುಪಾಯಿ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments