ಡಿಜಿಟಲ್ ವಹಿವಾಟು 
ವಾಣಿಜ್ಯ

ನೋಟು ನಿಷೇಧ: ಡಿಜಿಟಲ್ ವಹಿವಾಟಿನಲ್ಲಿ ಶೇ.80 ರಷ್ಟು ಏರಿಕೆ, 2017-18 ಕ್ಕೆ 1,800 ಕೋಟಿ ದಾಟುವ ನಿರೀಕ್ಷೆ

ನೋಟು ನಿಷೇಧದ ಪರಿಣಾಮ ಡಿಜಿಟಲ್ ವಹಿವಾಟಿನಲ್ಲಿ ಶೇ.80 ರಷ್ಟು ಏರಿಕೆಯನ್ನು ಅಂಕಿ-ಅಂಶಗಳು ಸೂಚಿಸುತ್ತಿದ್ದು, 2017-18 ನೇ ಸಾಲಿನಲ್ಲಿ ಒಟ್ಟು ವಹಿವಾಟು 1,800 ಕೋಟಿ ದಾಟಲಿದೆ ಎಂದು...

ನವದೆಹಲಿ: ನೋಟು ನಿಷೇಧದ ಪರಿಣಾಮ ಡಿಜಿಟಲ್ ವಹಿವಾಟಿನಲ್ಲಿ ಶೇ.80 ರಷ್ಟು ಏರಿಕೆಯನ್ನು ಅಂಕಿ-ಅಂಶಗಳು ಸೂಚಿಸುತ್ತಿದ್ದು, 2017-18 ನೇ ಸಾಲಿನಲ್ಲಿ ಒಟ್ಟು ವಹಿವಾಟು 1,800 ಕೋಟಿ ದಾಟಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಈ ವರ್ಷದ ಅಕ್ಟೋಬರ್ ವರೆಗೆ ಒಟ್ಟು ಡಿಜಿಟಲ್ ವಹಿವಾಟಿನ ಮೊತ್ತ 1,000 ಕೋಟಿಯಷ್ಟಿದ್ದು, ಒಂದೇ ತಿಂಗಳ ಡಿಜಿಟಲ್ ವಹಿವಾಟಿನ ಮೊತ್ತ 2016-17 ವರ್ಷದ ಪೂರ್ಣ ಮೊತ್ತಕ್ಕೆ ಸಮವಾಗಿದೆ. ಡಿಜಿಟಲ್ ವಹಿವಾಟು ಟ್ರೆಂಡ್ ಜೂನ್, ಜುಲೈ, ಆಗಸ್ಟ್ ತಿಂಗಳಿನಿಂದ ಮುಂದುವರೆದಿದ್ದು, ಸರಾಸರಿ 136-138 ಕೋಟಿ ವಹಿವಾಟು ನಡೆದಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. 
ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಡಿಜಿಟಲ್ ವಹಿವಾಟು ಏರಿಕೆ ಕಂಡಿದ್ದು, ನೋಟು ನಿಷೇಧದಿಂದ ಉಂಟಾದ ನಗದು ಅಭಾವ ತಹಬದಿಗೆ ಬಂದ ನಂತರ ಡಿಜಿಟಲ್ ವಹಿವಾಟಿನ ಪ್ರಮಾಣ ಅಚ್ಚರಿಯ ರೀತಿಯಲ್ಲಿ ಏರಿಕೆ ಕಾಣಲು ಪ್ರಾರಂಭವಾಗಿದೆ. 
ಯುಪಿಐ-ಭೀಮ್ (BHIM) ಐಎಂಪಿಎಸ್, ಎಂ-ವಾಲೆಟ್ ಡೆಬಿಟ್ ಕಾರ್ಡ್ ಗಳ ಮೂಲಕ ಸರಾಸರಿ ವಹಿವಾಟುಗಳು ಹೆಚ್ಚಿದೆ, ನವೆಂಬರ್ 2016 ರಿಂದ ಡಿಜಿಟಲ್ ವಹಿವಾಟಿನ ಗಾತ್ರದಲ್ಲಿ ಶೇ.221 ರಷ್ಟು ಏರಿಕೆಯಾಗಿದ್ದು, ತೆರಿಗೆ-ರಹಿತ ರಶೀದಿ ಪೋರ್ಟಲ್ ಗಳಲ್ಲಿ ಶೇ.118 ರಷ್ಟು ವಹಿವಾಟು ಹೆಚ್ಚಿದೆ ಎಂದು ಸರ್ಕಾರ ತಿಳಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT