ವಾಣಿಜ್ಯ

ವಾಹನ ಮಾರುಕಟ್ಟೆ: ಅಕ್ಟೋಬರ್ ನಲ್ಲಿ ಕಾರು, ದ್ವಿಚಕ್ರ ವಾಹನಗಳ ಮಾರಾಟ ಇಳಿಮುಖ

Raghavendra Adiga
ಚೆನ್ನೈ: ದೇಶೀಯ ಪ್ರಯಾಣಿಕರ ವಾಹನ ಮಾರಾಟ ಅಕ್ಟೋಬರ್ ತಿಂಗಳಲ್ಲಿ ತಗ್ಗಿದೆ. ಹಬ್ಬದ ಸಮಯದಲ್ಲಿ ವಾಹನಗಳು ಹೆಚ್ಚು ಮಾಋಆಟವಾಗಬಹುದೆಂಬ ವಾಹನ ತಯಾರಿಕಾ ಸಂಸ್ಥೆಗಳ ಲೆಕ್ಕಾಚಾರ ತಪ್ಪಾಗಿದ್ದು ಆಗಸ್ಟ್ ಸಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್ ನಲ್ಲಿ ವಾಹನ ಮಾರಾಟ ಇಳಿಮುಖಗೊಂಡಿದೆ. ಇದೇ ವೇಳೆ ವಾಣಿಜ್ಯ ವಾಹನಗಳು (ಎಲ್ ಸಿವಿ) ಮತ್ತು ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಗತಿಯಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ  1,84,666 ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,95,036 ಕಾರುಗಳು ಮಾರಾಟವಾಗಿದ್ದವು. ಈ ಮೂಲಕ ಕಾರ್ ಮಾರಾಟದಲ್ಲಿ ಶೇ. 5.32 ರಷ್ಟು ಕಡಿಮೆಯಾಗಿದೆ. ಭಾರತೀಯ ವಾಹನ ತಯಾರಕರ ಸೊಸೈಟಿ (ಎಸ್ ಐ ಎ ಎಂ) ಪ್ರಕಟಿಸಿರುವ ಅಂಕಿ ಅಂಶದಂತೆ  ಒಟ್ಟಾರೆ ವಾಹನ ಮಾರಾಟ ವಹಿವಾಟು ಇಳಿಮುಖವಾಗಿದ್ದು  ಅಕ್ಟೋಬರ್ 2016 ರ 22,01,489 ವಾಹನ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಶೇ. 1.79 ರಷ್ಟು  ಕಡಿಮೆಯಾಗಿ 21,62,164 ವಾಹನಗಳು ಮಾರಾಟವಾಗಿದೆ.
"ಹಬ್ಬದ ಋತುವಿನಲ್ಲಿ ಬಹಳಷ್ಟು ಉತ್ತಮವಾಗಿದ್ದ ವಾಹನ ಮಾರಾಟ ನಂತರದಲ್ಲಿ ಇಳಿಕೆ ಕಂಡಿದೆ. ಆದರೆ ಇದು ತಾತ್ಕಾಲಿಕ." ಎಸ್ ಐ ಎ ಎಂ ನಿರ್ದೇಶಕ ವಿಷ್ಣು ಮಾಥುರ್ ಹೇಳಿದ್ದಾರೆ. ಜುಲೈನಿಂದ ಸೆಪ್ಟೆಂಬರ್ ವರೆಗೆ, ವಾಹನ ಖರೀದಿಗಿಂತ ಹೆಚ್ಚು ದಾಸ್ತಾನನ್ನು ವಿತರಕರು ಶೋ ರೂಂ ಗಳಲ್ಲಿ ಕೂಡಿಹಾಕಿದ್ದರು. ಇದೀಗ ಅಕ್ಟೋಬರ್ವಾಹನ ರವಾನೆಯನ್ನೇ ಕಡಿಮೆ ಮಾದಲಾಗಿದೆ ಎಂದು ಅವರು ತಿಳಿಸಿದರು.
ಮಾರುತಿ ಮತ್ತು ಟಾಟಾ ಮೋಟಾರ್ಸ್ ನಂತಹಾ ವಾಹನ ತಯಾರಕರು ಹೊರತುಪಡಿಸಿ ಉಳಿದವರು ಈ ಕುಸಿತವನ್ನು ಕಂಡಿದ್ದಾರೆ. ಮಾರುತಿ ಸುಜುಕಿ ಇಂಡಿಯಾ 1,35,413 ವಾಹನಗಳನ್ನು ಮಾರಾಟ ಮಾಡಿದೆ. ಹುಂಡೈ ಮೋಟಾರ್ ಇಂಡಿಯಾ ಮಾರಾಟ ಕೂಡ ಶೇ. 0.86 ರಷ್ಟು ಕುಸಿತ ಕಂಡಿದ್ದು, 49,588 ವಾಹನಗಳು ಮಾರಾಟವಾಗಿದೆ.ಇನ್ನು ಮಹೀಂದ್ರಾ ಮತ್ತು ಮಹೀಂದ್ರಾ ಶೇ.5.35 ಶೇಕಡ ಇಳಿಕೆ ದಾಕಲಿಸಿದ್ದು 23,413 ವಾಹನಗಳನ್ನು ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ಈ ವರ್ಷದ ಅಕ್ಟೋಬರ್ ನಲ್ಲಿ 18,314 ವಾನಗಳನ್ನು ಮಾರಾಟ ನಡೆಸಿ ಮಾರಾಟದಲ್ಲಿ ಶೇ. 3.22 ಶೇ. ವೃದ್ದಿ ಕಂಡಿದೆ.
SCROLL FOR NEXT