ವಾಣಿಜ್ಯ

ಮೊಬೈಲ್ ಉದ್ಯಮ ವಿಲೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದ ರಿಲಾಯನ್ಸ್, ಏರ್ ಸೆಲ್

Srinivas Rao BV
ನವದೆಹಲಿ: ರಿಲಾಯನ್ಸ್ ಕಮ್ಯುನಿಕೇಷನ್ ಹಾಗೂ ಏರ್ ಸೆಲ್ ಉದ್ಯಮ ವಿಲೀನ ಪ್ರಕ್ರಿಯೆ ರದ್ದುಗೊಂಡಿದೆ. ಉಭಯ ಸಂಸ್ಥೆಗಳೂ ಪರಸ್ಪರ ಒಪ್ಪಿಗೆಯಿಂದ ವಿಲೀನ ಪ್ರಕ್ರಿಯೆ ರದ್ದುಗೊಂಡಿದೆ ಎಂದು ರಿಲಾಯನ್ಸ್ ಕಮ್ಯುನಿಕೇಷನ್ಸ್ ಹೇಳಿದೆ. 
ಮೊಬೈಲ್ ಉದ್ಯಮವನ್ನು ವಿಲೀನಗೊಳಿಸಲು 2016 ರ ಸೆಪ್ಟೆಂಬರ್ ನಲ್ಲಿ ರಿಲಾಯನ್ಸ್ ಹಾಗೂ ಏರ್ ಸೆಲ್ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಕಾನೂನು ಮತ್ತು ನಿಯಂತ್ರಕ ಅನಿಶ್ಚಿತತೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಾಗಿ ಸಂಬಂಧಿತ ಅನುಮೋದನೆ ಸಿಗಲಿಲ್ಲ ಎಂದು ರಿಲಾಯನ್ಸ್-ಏರ್ ಸೆಲ್ ವಿಲೀನ ಪ್ರಕ್ರಿಯೆ ಸಾಧ್ಯವಾಗಲಿಲ್ಲ ಎಂದು ರಿಲಾಯನ್ಸ್ ಕಮ್ಯುನಿಕೇಷನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. 
ಸಾಲವನ್ನು ಕಡಿಮೆ ಮಾಡಲು ವಿಲೀನ ಒಪ್ಪಂದಕ್ಕೆ ಮುಂದಾಗಲಾಗಿತ್ತು. ಆದರೆ ಸಂಸ್ಥೆಯ ಆಡಳಿತ ಮಂಡಳಿ ಪರ್ಯಾಯ ಮಾರ್ಗ ಕಂಡುಕೊಂಡಿದೆ ಎಂದು ಪ್ರಕಟಣೆಯಲ್ಲಿ ರಿಲಾಯನ್ಸ್ ಸಂಸ್ಥೆ ತಿಳಿಸಿದೆ. 
SCROLL FOR NEXT