ವಾಣಿಜ್ಯ

ಮುಕೇಶ್ ಅಂಬಾನಿ ದೇಶದ ಅತಿ ಶ್ರೀಮಂತ

Sumana Upadhyaya
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಧ ಮುಕೇಶ್ ಅಂಬಾನಿ ಸತತ ಹತ್ತನೇ ವರ್ಷ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿರುವ 2017ನೇ ಸಾಲಿನ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯವರ ಸಂಪತ್ತಿನ ಮೌಲ್ಯ ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳಾಗಿವೆ ಎಂದು ಹೇಳಿದೆ. ಈ ವರ್ಷ ನಮ್ಮ ದೇಶದಲ್ಲಿ ಆರ್ಥಿಕ ಕುಸಿತವಿದ್ದರೂ ಸಹ 100 ಶ್ರೀಮಂತ ವ್ಯಕ್ತಿಗಳ ಸಂಪತ್ತಿನ ಮೌಲ್ಯ ಶೇಕಡಾ 26ರಷ್ಟು ಏರಿಕೆಯಾಗಿದೆ.
ವಿಪ್ರೊದ ಅಜೀಂ ಪ್ರೇಮ್ ಜಿ ಅವರ ಸಂಪತ್ತಿನ ಮೌಲ್ಯ 1.18 ಲಕ್ಷ ಕೋಟಿ ಗಳಿಸುವ ಮೂಲಕ ಎರಡನೇ ಸ್ಥಾನ ಗಳಿಸಿದ್ದಾರೆ. ಇವರು ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದರು. ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಸನ್ ಫಾರ್ಮಾದ ದಿಲೀಪ್ ಶಾಂಘ್ವಿ ಈ ವರ್ಷ 9ನೇ ಸ್ಥಾನದಲ್ಲಿದ್ದಾರೆ. ಅವರ ಗಳಿಕೆ ಮೌಲ್ಯ 12.1 ಶತಕೋಟಿಯಾಗಿದೆ ಎಂದು ಫೋರ್ಬ್ಸ್ ಪಟ್ಟಿ ತಿಳಿಸಿದೆ.
ಪ್ರಧಾನ ಮಂತ್ರಿಯವರ ಆರ್ಥಿಕ ಪ್ರಯೋಗಗಳನ್ನು ಭಾರತದ ಕೋಟಿದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮುಕೇಶ್ ಅಂಬಾನಿಯವರು ಏಷ್ಯಾ ಖಂಡದಲ್ಲಿ ಟಾಪ್ 5 ಶ್ರೀಮಂತರ ಪೈಕಿ ಒಬ್ಬರಾಗಿದ್ದಾರೆ. 
SCROLL FOR NEXT