ವಾಷಿಂಗ್ ಟನ್: ಭಾರತದ 2017 ನೇ ಸಾಲಿನ ಆರ್ಥಿಕ ಬೆಳವಣಿಗೆಯನ್ನು ಐಎಂಎಫ್ ಶೇ.6.7 ಕ್ಕೆ ಇಳಿಕೆ ಮಾಡಿದ್ದು, ಏಪ್ರಿಲ್ ಹಾಗೂ ಜುಲೈ ತಿಂಗಳ ಮುನ್ನೋಟದಲ್ಲಿ ದಾಖಲಾಗಿದ್ದಕ್ಕಿಂತ ಶೇ.0.5 ರಷ್ಟು ಕಡಿಮೆ ಮಾಡಿದೆ.
ಬೆಳವಣಿಗೆ ದರ ಕುಗ್ಗಲು ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯನ್ನು ಐಎಂಎಫ್ ಕಾರಣವಾಗಿ ನೀಡಿದೆ. ಇನ್ನು 2018 ರ ಆರ್ಥಿಕ ಬೆಳವಣಿಗೆ ಮುನ್ನೋಟದಲ್ಲಿಯೂ ಐಎಂಎಫ್ ಭಾರತದ ಬೆಳವಣಿಗೆ ದರವನ್ನು ಏಪ್ರಿಲ್, ಜುಲೈ ನಲ್ಲಿದ್ದ ಮುನ್ನೋಟಕ್ಕಿಂತ ಶೇ.0.3 ರಷ್ಟು ಕಡಿಮೆಗೊಳಿಸಿದ್ದು 2018 ರಲ್ಲಿ ಶೇ.7.4 ರಷ್ಟಿರಲಿದೆ ಎಂದು ಅಂದಾಜಿಸಿದೆ.
2016 ರಲ್ಲಿ ಭಾರತದ ಬೆಳವಣಿಗೆ ದರ ಶೇ.7.1 ರಷ್ಟಿತ್ತು, ಏಪ್ರಿಲ್ ವರದಿಗಿಂತ ಶೇ.0.3 ರಷ್ಟು ಏರಿಕೆಯಾಗಿತ್ತು. ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯ ನಂತರ ಉಂಟಾದ ಅನಿಶ್ಚಿತತೆ ನಂತರದ ಬೆಳವಣಿಗೆ ದರದ ಮೇಲೆ ಪರಿಣಾಮ ಬೀರಿದೆ ಎಂದು ಐಎಂಎಎಫ್ ತನ್ನ ವಿಶ್ವ ಆರ್ಥಿಕ ಮುನ್ನೋಟದಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics