ಪೆಟ್ರೋಲ್ ಬಂಕ್ 
ವಾಣಿಜ್ಯ

ಅ.13ರ ಮುಷ್ಕರ ಕೈಬಿಟ್ಟ ಪೆಟ್ರೋಲ್ ಬಂಕ್ ಮಾಲೀಕರು!

ಅಕ್ಟೋಬರ್ 13ರಂದು ದೇಶಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದ ಪೆಟ್ರೋಲ್ ಬಂಕ್ ಮಾಲೀಕರು ಇದೀಗ ಮುಷ್ಕರವನ್ನು ಕೈಬಿಟ್ಟಿದ್ದಾರೆ...

ಬೆಂಗಳೂರು: ಅಕ್ಟೋಬರ್ 13ರಂದು ದೇಶಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದ ಪೆಟ್ರೋಲ್ ಬಂಕ್ ಮಾಲೀಕರು ಇದೀಗ ಮುಷ್ಕರವನ್ನು ಕೈಬಿಟ್ಟಿದ್ದಾರೆ. 
ತೈಲ ಕಂಪನಿಗಳು ಮಾತುಕತೆಗೆ ಮುಂದಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 
ಕಮಿಷನ್ ಹೆಚ್ಚಳ ಮತ್ತು ತೈಲ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ನಾಳೆ ಮಧ್ಯರಾತ್ರಿಯಿಂದಲೇ ಮುಷ್ಕರ ನಡೆಸಲು ಯುನೈಟೆಡ್ ಪೆಟ್ರೋಲಿಯಂ ಫ್ರಂಟ್(ಯುಪಿಎಫ್) ತೀರ್ಮಾನಿಸಿತ್ತು. 
ಪ್ರತಿ ಆರು ತಿಂಗಳಿಗೊಮ್ಮೆ ವಿತರಕರಿಗೆ ನೀಡುವ ಕಮಿಷನ್ ದರ ಪರಿಷ್ಕರಣೆ, ಕಾರ್ಮಿಕರು, ಸಾರಿಗೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ನಷ್ಟ ನಿರ್ವಹಣೆ ಮೊತ್ತ ನೀಡಬೇಕು ಎಂಬ ಒಪ್ಪಂದ 2016ರ ನವೆಂಬರ್ ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಮತ್ತು ವಿತರಕರ ಮಧ್ಯೆ ನಡೆದಿತ್ತು. 
ಆದರೆ ತೈಲ ಕಂಪೆನಿಗಳು ಈ ಎಲ್ಲಾ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಯುಪಿಎಫ್ ಮುಷ್ಕರ ಹೂಡಲು ಮುಂದಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

Ranji Trophy final: ಮೊದಲ ದಿನ ಬಲಿಷ್ಠ ಕರ್ನಾಟಕ ವಿರುದ್ಧ ಪ್ರಾಬಲ್ಯ ಸಾಧಿಸಿದ ಜಮ್ಮು ಕಾಶ್ಮೀರ!

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್; ಜಾಮೀನು ಮಂಜೂರು

AIADMKಯಿಂದ ಮತ್ತಷ್ಟು ಫ್ರೀಬೀಸ್ ಘೋಷಣೆ; ಪ್ರತಿ ಕುಟುಂಬಕ್ಕೆ 10,000 ರೂ. ನೆರವು!

ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ; 15 ಲಕ್ಷ ರೂ ಪರಿಹಾರ ಘೋಷಣೆ

SCROLL FOR NEXT