ವಾಣಿಜ್ಯ

ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ: ಸರ್ಕಾರಕ್ಕೆ ಇಎಸಿ ಸಲಹೆ

Sumana Upadhyaya
ನವದೆಹಲಿ: ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಒತ್ತು ನೀಡಬೇಕು ಎಂದು ಆರ್ಥಿಕ ಸಲಹಾ ಮಂಡಳಿ ಸಲಹೆ ನೀಡಿದೆ.
ವಿವಿಧ ಯೋಜನೆಗಳನ್ನು ಬಳಸಿಕೊಂಡು ಹೂಡಿಕೆ ಮತ್ತು ರಫ್ತಿಗಳನ್ನು ಹೆಚ್ಚಿಸಿ ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸುವ ಕುರಿತು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಮಂಡಳಿಗೆ ಪ್ರಸ್ತುತಪಡಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕ ಕುಸಿತ ಕಂಡುಬಂದಿದ್ದು ಕಳೆದ ಮೂರು ವರ್ಷಗಳಲ್ಲಿಯೇ ಅದು ಕಡಿಮೆಯಾಗಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೇಕಡಾ 5.7ರಷ್ಟು ವಿತ್ತೀಯ ಬೆಳವಣಿಗೆ ಕಂಡುಬಂದಿದೆ.
ಆರ್ಥಿಕತೆ ಕುಸಿಯುತ್ತಿರುವ ಸಂದರ್ಭದಲ್ಲಿ ನಿರುದ್ಯೋಗ ಸಮಸ್ಯೆ ಪ್ರಮುಖ ವಿಷಯವಾಗಿರುವಾಗ 10 ಪ್ರಮುಖ ವಿಷಯಗಳಿಗೆ ಸರ್ಕಾರ ಆದ್ಯತೆ ನೀಡಲು ಆರ್ಥಿಕ ಸಲಹಾ ಮಂಡಳಿ ಹೇಳಿದೆ.
SCROLL FOR NEXT