ಜನ್-ಧನ್ ಯೋಜನೆ 
ವಾಣಿಜ್ಯ

ಜನ್ ಧನ್ ಯೋಜನೆಯಿಂದ ತಂಬಾಕು, ಆಲ್ಕೋಹಾಲ್ ಸೇವನೆ ಪ್ರಮಾಣ ಇಳಿಕೆ: ಎಸ್ ಬಿಐ ವರದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ ಧನ್ ಯೋಜನೆಯಿಂದಾಗಿ ದೇಶದ ರಾಜ್ಯಗಳಲ್ಲಿ ಆಲ್ಕೋಹಾಲ್ ಮತ್ತು ತಂಬಾಕು ಸೇವನೆ ಮಾಡುವವರ ಸಂಖ್ಯೆಯಲ್ಲಿ ..

ನವದೆಹಲಿ:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ ಧನ್ ಯೋಜನೆಯಿಂದಾಗಿ ದೇಶದ ರಾಜ್ಯಗಳಲ್ಲಿ ಆಲ್ಕೋಹಾಲ್ ಮತ್ತು ತಂಬಾಕು ಸೇವನೆ ಮಾಡುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಂಶೋಧನಾ ಘಟಕ ಹೇಳಿದೆ.
ಜನ್ ಧನ್- ಆಧಾರ್ ಮೊಬೈಲ್ ಸರ್ಕಾರದ ಸಬ್ಸಿಡಿಯನ್ನು ಉತ್ತಮ ವಾಗಿ ಬಳಸಿಕೊಳ್ಳಲು ಹಾಗೂ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಲು ಸಹಾಯವಾಗಿದೆ, ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಮತ್ತು ಸಾರಾಯಿ  ಬಳಕೆಯಲ್ಲಿ ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ.
2016 ರ ಅಕ್ಟೋಬರ್ ನಿಂದ ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳ ಜನರ ಜೀವನ ಶೈಲಿಯಲ್ಲಿ ಬದಲಾವಣೆ ಉಂಟಾಗಿರುವುದರಿಂದ ವೈದ್ಯಕೀಯ ಸೇವೆಗಳಿಗೆ ಬೇಡಿಕೆ ಹೆಚ್ಚಿದೆ ಎಂದು ವರದಿ ಉಲ್ಲೇಖಿಸಿದೆ.
ಪ್ರಧಾನ ಮಂತ್ರಿಯವರ ಜನ್ ಧನ್ ಯೋಜನೆ  ಖಾತೆಗಳಿಂದ ಗ್ರಾಮೀಣ ಭಾಗದಲ್ಲಿ ಹಣ ದುಬ್ಬರ ಕಡಿಮೆ ಮಾಡಿದೆ. 
3 ವರ್ಷಗ ಹಿಂದೆ ಜನ್ ಧನ್ ಯೋಜನೆ  ಆರಂಭಿಸಿದಾಗಿನಿಂದ ಸುಮಾರು 30 ಕೋಟಿ ಕುಟುಂಬಗಳಿಗೆ ಬ್ಯಾಂಕ್ ಖಾತೆ ಸೌಲಭ್ಯ ದೊರೆತಿದೆ. ಉತ್ತರ ಪ್ರದೇಶದಲ್ಲಿ 23 ಕೋಟಿ ಖಾತೆಗಳು, ನಂತರ ಬಿಹಾರದಲ್ಲಿ 4.7 ಕೋಟಿ,  ಹಾಗೆಯೇ ಪಶ್ಚಿಮ ಬಂಗಾಳದಲ್ಲಿ 2.8 ಕೋಟಿ ಖಾತೆಳನ್ನು ಹೊಂದಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅಂದರೆ ಸುಮಾರು ಶೇ. 42 ರಷ್ಟು ಜನ್ ಧನ್ ಖಾತೆಗಳಿವೆ, ಹೀಗಾಗಿ ಪ್ರತಿಯೊಂದು ಕುಟುಂಬಗಳು ಬ್ಯಾಂಕಿಂಗ್ ಸೌಲಭ್ಯ ಹೊಂದುವಂತಾಗಿದೆ. ಶೂನ್ಯ  ಖಾತೆಗಳು ಶೇ. 77 ರಿಂದ ಶೇ.20 ರವರೆಗೆ ಇಳಿದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT