ಸಂಸ್ಥೆಗಳು ರಾನ್ಸಮ್ವೇರ್ ದಾಳಿ ವಿರುದ್ಧ ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳುವ ಅಗತ್ಯವಿದೆ, ತಜ್ಞರ ವರದಿ
ನವದೆಹಲಿ: ಸೈಬರ್ ಅಪರಾಧಿಗಳು ಹೊರಗುತ್ತಿಗೆ ಮತ್ತು ಸಂಶೋಧನೆ ಸಂಸ್ಥೆಗಳಿಗೆ ಬಾರೀ ಅಪಾಯ ತಂದೊಡ್ಡಿದ್ದಾರೆ. ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ರಾನ್ಸಮ್ವೇರ್ ನಿಮ್ಮ ವ್ಯವಹಾರಗಳನ್ನು ಹಾಳು ಮಾಡುವದಕ್ಕೆ ಮುನ್ನ ಎಚ್ಚರಗೊಳ್ಳಿ ಎಂಡು ವಿಶ್ವದಾದ್ಯಂತ ರಾನ್ಸಮ್ವೇರ್ ದಾಳಿಗಳನ್ನು ಎದುರಿಸಲು ಕೆಲಸ ಮಾಡುತ್ತಿರುವ ತಜ್ಞರು ಹೇಳಿದ್ದಾರೆ.
ಸಿಸ್ಕೋ 2017 ಮಧ್ಯ ವಾರ್ಷಿಕ ಸೈಬರ್ ಸೆಕ್ಯುರಿಟಿ ವರದಿ ಪ್ರಕಾರ, ರಾನ್ಸಮ್ವೇರ್ ಡಿಜಿಟಲ್ ವ್ಯವಹಾರಕ್ಕೆ ಅತ್ಯಂತ ಭಯಾನಕ ಅಡ್ಡಿಯುಂಟುಮಾಡಲಿದೆ.. ಜಾಗತಿಕವಾಗಿ, ಸುಮಾರು 49 ಪ್ರತಿಶತದಷ್ಟು ಉದ್ಯಮಗಳು 2016 ರಲ್ಲಿ ಕನಿಷ್ಟ ಒಂದು ಸೈಬರ್ ದಾಳಿಯನ್ನು ಅನುಭವಿಸಿವೆ. "ರಾನ್ಸಮ್ವೇರ್ ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿ ಸಂಸ್ಥೆಯನ್ನು ಗುರಿಯಾಗಿಸುತ್ತದೆ" ಎಂದು ಡೈಮೆನ್ಶನ್ ಡಾಟಾ ಏಶಿಯಾ ಫೆಸಿಪಿಕ್ ಅರ್ಲಿ ಜನರಲ್ ಮ್ಯಾನೇಜರ್ - ನೆವಿಲ್ಲೆ ಬರ್ಡನ್ ಹೇಳುತ್ತಾರೆ. ರಾನ್ಸಮ್ವೇರ್ ದಾಳಿಯ ವಿರುದ್ಧ ಸಂಸ್ಥೆಗಳಿಗೆ ಸಹಾಯ ಮಾಡಲು ಡೈಮೆನ್ಷನ್ ಡೇಟಾ, ಜಾಗತಿಕ ಐಸಿಟಿ ಸೇವೆಗಳು, ಸಿಸ್ಕೋ ಮತ್ತು ಇತರೆ ರಾನ್ಸಮ್ವೇರ್ ನಿಂದ ಪರಿಹಾರ ಒದಗಿಸಬಲ್ಲ ಸಂಸ್ಥೆಗಳು ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿವೆ.
'ರಾನ್ಸಮ್ವೇರ್: ದಿ ಪರ್ವಸಿವ್ ಬಿಸಿನೆಸ್ ಡಿಸ್ಟ್ರಾಪ್ಟರ್' - ಕಾಗದವು ರಾನ್ಸಮ್ವೇರ್ ನಿಂದ ಯಾವ ತೊಂದರೆಯಾಗದಂತಿರಲು ಸಂಸ್ಥೆಗಳು ಯಾವ ರೀತಿ ಕ್ರಮಕ್ಕೆ ಮುಂದಾಗಬೇಕೆಂದು ಇದರಲ್ಲಿ ಹೇಳಲಾಗಿದೆ. "ಭದ್ರತಾ ಸಲಕರಣೆಗಳಿಂದಷ್ಟೆ ಬಳಸಿಕೊಳ್ಳುವುದರಿಂದ ರಾನ್ಸಮ್ವೇರ್ ನಿಂದ ಸಂಸ್ಥೆಗಳನ್ನು ರಕ್ಷಿಸಲು ಸಾಧ್ಯವಿಲ್ಲ; ಅದಕ್ಕಾಗಿ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ" ಎಂದು ಅಮೆರಿಕ ಮತ್ತು ಯುರೋಪಿನಲ್ಲಿ ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಸೈಬರ್ ಭದ್ರತಾ ಸಲಹೆಗಾರರಾಗಿರುವ ಶಂಕರ್ ನಾರಾಯಣ್ ಅಭಿಪ್ರಾಯ ಪಡುತ್ತಾರೆ.