ಕರ್ನಾಟಕದಲ್ಲಿ ಕರಾವಳಿ ಸವಕಳಿ ತಡೆಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನಿಂದ 65.5 ಮಿಲಿಯನ್ ಡಾಲರ್ ನೆರವು
ಕರ್ನಾಟಕದಲ್ಲಿ ಕರಾವಳಿ ಸವಕಳಿಯನ್ನು ತಡೆಗಟ್ಟುವುದಕ್ಕಾಗಿ ಕ್ರಮ ಕೈಗೊಳ್ಳಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಏಷ್ಯನ್ ಬ್ಯಾಂಕ್ 65.5 ಮಿಲಿಯನ್ ಡಾಲರ್ ಮೊತ್ತದ ನೆರವು ನೀಡಲು ಮುಂದಾಗಿದೆ.
ನವದೆಹಲಿ: ಕರ್ನಾಟಕದಲ್ಲಿ ಕರಾವಳಿ ಸವಕಳಿಯನ್ನು ತಡೆಗಟ್ಟುವುದಕ್ಕಾಗಿ ಕ್ರಮ ಕೈಗೊಳ್ಳಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಏಷ್ಯನ್ ಬ್ಯಾಂಕ್ 65.5 ಮಿಲಿಯನ್ ಡಾಲರ್ ಮೊತ್ತದ ನೆರವು ನೀಡಲು ಮುಂದಾಗಿದೆ.
ಕೋಸ್ಟಲ್ ಪ್ರೊಟೆಕ್ಷನ್ ಹಾಗೂ ಮ್ಯಾನೇಜ್ಮೆಂಟ್ ಇನ್ವೆಸ್ಟ್ಮೆಂಟ್ ಪ್ರೋಗ್ರಾಮ್ ಗಾಗಿ ಮಂಜೂರು ಮಾಡಲಾಗುವ 250 ಮಿಲಿಯನ್ ಡಾಲರ್ ನ 2 ನೇ ಕಂತು ಇದಾಗಿದೆ ಎಂದು ಎಡಿಬಿ ಹೇಳಿಕೆ ನೀಡಿದೆ. ಕರಾವಳಿ ಪ್ರದೇಶದ ರಕ್ಷಣೆಗೆ ಅಗತ್ಯವಿರುವ ಕ್ರಮಗಳಿಗೆ ಆರ್ಥಿಕ ನೆರವು ಸಿಗಲಿದ್ದು ಕರ್ನಾಟಕದ ಲೋಕೋಪಯೋಗಿ, ಬಂದರು ಹಾಗೂ ಜಲಸಾರಿಗೆ ಇಲಾಖೆಯ ಸಾಂಸ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗಲಿದೆ. ಎಡಿಬಿಯ ಪ್ರಾದೇಶಿಕ ನಿರ್ದೇಶಕ ಕೆನಿಚಿ ಯೋಕೋಯಾಮಾ, ಹಾಗೂ ಬಹುಪಕ್ಷೀಯ ಸಂಸ್ಥೆಗಳ ಜಂಟಿ ನಿರ್ದೇಶಕ ಸಮೀರ್ ಕುಮಾರ್ ಖರೆ ಅವರು ಒಪ್ಪಂದಕ್ಕೆ ಸಹಿಹಾಕಿದ್ದಾರೆ.
ಹವಾಮಾನ ಬದಲಾವಣೆಯ ಪರಿಣಾಮದಿಂದ ಕರಾವಳಿ ರಕ್ಷಣೆ ಹಾಗೂ ನಿರ್ವಹಣೆ ಅಭಿವೃದ್ಧಿಗೆ ಪ್ರಮುಖ ಸವಾಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.