ಜಿಎಸ್ ಟಿ 
ವಾಣಿಜ್ಯ

ಸಣ್ಣ ಉದ್ಯಮ, ರೆಸ್ಟೋರೆಂಟ್ ಗಳಿಗೆ ಜಿಎಸ್ ಟಿ ಕಡಿಮೆ ಮಾಡಿ: ಹಣಕಾಸು ಸಚಿವರ ಸಮಿತಿ

ಸಣ್ಣ ಉದ್ಯಮ ಹಾಗೂ ರೆಸ್ಟೋರೆಂಟ್ ಗಳಿಗೆ ವಿಧಿಸಲಾಗುತ್ತಿರುವ ಜಿಎಸ್ ಟಿ ಯನ್ನು ಕಡಿಮೆ ಮಾಡಬೇಕೆಂದು ಹಣಕಾಸು ಸಚಿವರ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ನವದೆಹಲಿ: ಸಣ್ಣ ಉದ್ಯಮ ಹಾಗೂ ರೆಸ್ಟೋರೆಂಟ್ ಗಳಿಗೆ ವಿಧಿಸಲಾಗುತ್ತಿರುವ ಜಿಎಸ್ ಟಿ ಯನ್ನು ಕಡಿಮೆ ಮಾಡಬೇಕೆಂದು ಹಣಕಾಸು ಸಚಿವರ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. 
ರಾಜ್ಯಗಳ ಹಣಕಾಸು ಸಚಿವರಿರುವ ಸಮಿತಿ ಅ.29 ರಂದು ಈ ಸಲಹೆ ನೀಡಿದ್ದು, ರೆಸ್ಟೋರೆಂಟ್ ಗಳಿಗೆ ವಿಧಿಸಲಾಗುತ್ತಿರುವ ಜಿಎಸ್ ಟಿಯನ್ನು ಕಡಿಮೆ ಮಾಡಬೇಕು ಹಾಗೂ ಕಡಿಮೆ ಸಣ್ಣ ಉದ್ಯಮಿಗಳು, ವ್ಯಾಪಾರಿಗಳು, ಉತ್ಪಾದಕರಿಗೆ ಶೇ.1 ರಷ್ಟು ತೆರಿಗೆಯನ್ನು ವಿಧಿಸಬೇಕು ಎಂದು ಸಲಹೆ ನೀಡಿದೆ. 
ಈಗ ವಾರ್ಷಿಕವಾಗಿ 1 ಕೋಟಿ ರೂಪಾಯಿ ವಹಿವಾಟು ನಡೆಸುವ ರೆಸ್ಟೋರೆಂಟ್ ಹಾಗೂ ಉತ್ಪಾದಕರು ಅನುಕ್ರಮವಾಗಿ ಶೇ.2 ಹಾಗೂ 5 ರಷ್ಟು ತೆರಿಗೆಯನ್ನು ಪಾವತಿಸಬೇಕು, ಹಾಗೂ ವ್ಯಾಪಾರಿಗಳು ಶೇ.1 ರಷ್ಟು ಜಿಎಸ್ ಟಿ ಪಾವತಿ ಮಾಡಬೇಕೆಂಬ ನಿಯಮವಿದೆ. 
ಜಿಎಸ್ ಟಿ ಸಂಯೋಜನೆಯನ್ನು ಮತ್ತಷ್ಟು ಆಕರ್ಷಕವಾಗಿರುವಂತೆ ಮಾಡಲು ಈಗ ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮಾ ನೇತೃತ್ವದ ರಾಜ್ಯ ಹಣಕಾಸು ಸಚಿವರ ಸಮಿತಿ ಕೆಲವು ಸಲಹೆಗಳನ್ನು ನೀಡಿದ್ದು,  ಜಿಎಸ್ ಟಿ ಕಾಂಪೋಸಿಷನ್ ಯೋಜನೆಯಡಿ ಬಾರದ ಎಸಿ ಹಾಗೂ ನಾನ್ ಎಸಿ ರೆಸ್ಟೋರೆಂತ್ ಗಳ ನಡುವಿನ ವರ್ಗೀಕರಣವನ್ನು ತೆಗೆದುಹಾಕಿ, ಎಸಿ ಹಾಗೂ ನಾನ್ ಎಸಿ ರೆಸ್ಟೋರೆಂಟ್ ಗಳಿಗೆ ಇನ್ ಪುಟ್ ಕ್ರೆಡಿಟ್ ಸಹಿತ ಶೇ.12 ರಷ್ಟು ತೆರಿಗೆ ವಿಧಿಸಬೇಕು ಎಂದು ಹೇಳಿದೆ.   
ಇದೇ ವೇಳೆ 5 ಸ್ಟಾರ್ ಹೋಟೆಲ್ ನ ವರ್ಗೀಕರಣವನ್ನು ತೆಗೆದುಹಾಕಿ 7,500 ಕ್ಕಿಂತ ಹೆಚ್ಚು ರೂಂ ಟಾರಿಫ್ ಇರುವ ಯಾವುದೇ ಹೋಟೆಲ್ ಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸುವುದು ಸೂಕ್ತ ಎಂದು ಸಚಿವರ ಸಮಿತಿ ಅಭಿಪ್ರಾಯಪಟ್ಟಿದೆ. 
ನ.10 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಲಹೆಗಳನ್ನು ಪರಿಗಣಿಸಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ದೆಹಲಿ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದರೂ 6ನೇ ಸುತ್ತಿನ ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುವುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!