ವಾಣಿಜ್ಯ

ಆಲ್ಕೋಹಾಲ್ ಪರೀಕ್ಷೆಗೆ ಒಳಪಡದ ಏರ್ ಇಂಡಿಯಾದ 130 ಪೈಲಟ್, 430 ಸಿಬ್ಬಂದಿ ಕೈಬಿಡುವ ಸಾಧ್ಯತೆ

Lingaraj Badiger
ಮುಂಬೈ: ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಸದಾ ಆಲ್ಕೋಹಾಲ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಏರ್ ಇಂಡಿಯಾದ ಸುಮಾರು 130 ಪೈಲಟ್ ಗಳು ಹಾಗೂ 430 ವಿಮಾನ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ. 
ವಿಮಾನ ಹಾರಟಕ್ಕೂ ಮುನ್ನ ಹಾಗೂ ನಂತರ ವಿಮಾನ ಪೈಲಟ್ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಆಲ್ಕೋಹಾಲ್ ಪರೀಕ್ಷೆಗೆ ಒಳಪಡಬೇಕು ಎಂಬ ನಿಯಮವಿದೆ. ಆದರೆ ಈ ಸಿಬ್ಬಂದಿ ಸದ ಆಲ್ಕೋಹಾಲ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದು, ಇವರು ಸಿಂಗಪುರ, ಕುವೈತ್, ಬ್ಯಾಂಕಾಕ್ ಅಹಮದಾಬಾದ್ ಮತ್ತು ಗೋವಾ ಮಾರ್ಗಗಳಲ್ಲಿ ಹಾರಾಟ ನಡೆಸಿದ್ದಾರೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಈ ಎಲ್ಲಾ ಸಿಬ್ಬಂದಿಗೆ ಡಿಜಿಸಿಎ ಏರ್ ಇಂಡಿಯಾ ಮೂಲಕ ಈಗಾಗಲೇ ಅಲ್ಟಿಮೇಟಂ ಜಾರಿಗೊಳಿಸಿದ್ದು, ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಡಿಜಿಸಿಎ ಮೂಲಗಳು ತಿಳಿಸಿವೆ.
ಒಂದೇ ಬಾರಿಗೆ 130 ಪೈಲಟ್ ಗಳು ಹಾಗೂ 430 ವಿಮಾನ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದರೆ ಏರ್ ಇಂಡಿಯಾ ಕಾರ್ಯಾಚರಣೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಡಿಜಿಸಿಎ ಹಂತ ಹಂತವಾಗಿ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ.
ವಿಮಾನ ಹಾರಾಟಕ್ಕೂ 12 ಗಂಟೆಗಳ ಮುನ್ನ ಪೈಲಟ್ ಆಗಲಿ ಸಿಬ್ಬಂಗಿ ಆಗಲಿ ಮದ್ಯಪಾನ ಮಾಡಿರಬಾರದು ಎಂಬ ನಿಯಮವಿದೆ. ಹೀಗಾಗಿ ವಿಮಾನ ಹಾರಟಕ್ಕೂ ಮುನ್ನ ಮತ್ತು ನಂತರ ಕಡ್ಡಾಯವಾಗಿ ಆಲ್ಕೋಹಾಲ್ ಪರೀಕ್ಷೆಗೆ ಒಳಗಾಗಬೇಕು. ಆದರೆ 130 ಪೈಲಟ್ ಗಳು ಮತ್ತು 430 ಸಿಬ್ಬಂದಿ ಇದನ್ನು ಉಲ್ಲಂಘಿಸಿರುವುದಾಗಿ ಡಿಜಿಸಿಎ ತಿಳಿಸಿದೆ.
SCROLL FOR NEXT