ಏರ್ ಟೆಲ್ ನಿಂದ 5 ರೂಪಾಯಿಗೆ 4 ಜಿಬಿ ಡಾಟಾ ಆಫರ್!
ಟೆಲಿಕಾಂ ವಲಯದಲ್ಲಿ ಜಿಯೋ ಸಂಚಲನದಿಂದ ಟೆಲಿಕಾಂ ಆಪರೇಟರ್ ಗಳ ನಡುವೆ ಉಂಟಾಗಿರುವ ಪೈಪೋಟಿ ಮುಂದುವರೆದಿದ್ದು, ಏರ್ ಟೆಲ್ ಹುಬ್ಬೇರಿಸುವಂತಹ ಆಫರ್ ಒಂದನ್ನು ಘೋಷಿಸಿದೆ.
ನವದೆಹಲಿ: ಟೆಲಿಕಾಂ ವಲಯದಲ್ಲಿ ಜಿಯೋ ಸಂಚಲನದಿಂದ ಟೆಲಿಕಾಂ ಆಪರೇಟರ್ ಗಳ ನಡುವೆ ಉಂಟಾಗಿರುವ ಪೈಪೋಟಿ ಮುಂದುವರೆದಿದ್ದು, ಏರ್ ಟೆಲ್ ಹುಬ್ಬೇರಿಸುವಂತಹ ಆಫರ್ ಒಂದನ್ನು ಘೋಷಿಸಿದೆ.
ಡಾಟಾ ಪೈಪೋಟಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವ ಏರ್ ಟೆಲ್ 5 ರೂಪಾಯಿ ಪ್ರಾರಂಭಿಕ ದರದಿಂದ ಡಾಟಾ ಹಾಗೂ ವಾಯ್ಸ್ ಕರೆ ಪ್ಲಾನ್ ನ್ನು ಘೋಷಿಸಿದೆ. ಆದರೆ ಇದಕ್ಕೆ ಕೆಲವು ನಿಯಮಗಳು ಅನ್ವಯವಾಗಲಿದ್ದು, ಅರ್ಹತೆಗೆ ಅನುಗುಣವಾಗಿ ಆಫರ್ ಲಭಿಸಲಿದೆ.
5 ರೂಪಾಯಿಗೆ 3ಜಿ ಹಾಗೂ 4ಜಿಯ ಗ್ರಾಹಕರಿಗೆ 4 ಜಿಬಿ ಇಂಟರ್ ನೆಟ್ ಡಾಟಾ ದೊರೆಯಲಿದ್ದು, ಕೇವಲ 7 ದಿನಗಳಿಗೆ ಮಾತ್ರ ವ್ಯಾಲಿಡಿಟಿ ಹೊಂದಿದೆ. ರೂಪಾಯಿ 8, 15, 40, 349 ಹಾಗೂ 399 ರೂಗಳಿಗೆ ಏರ್ ಟೆಲ್ ಡಾಟಾ ಆಫರ್ ಗಳನ್ನು ನೀಡುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.