ನವದೆಹಲಿ: 21 ನೇ ಜಿಎಸ್ ಟಿ ಕೌನ್ಸಿಲ್ ಸಭೆ ಇಂದು ಹೈದರಾಬಾದ್ ನಲ್ಲಿ ನಡೆಯಲಿದೆ. ಸರಕು ಮತ್ತು ಸೇವಾ ತೆರಿಗೆ ಜಾಲ (ಜಿಎಸ್ ಟಿ ಎನ್) ನ ಚಾಲನೆಯಲ್ಲಿನ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿ ಈ ಸಭೆ ಕರೆಯಲಾಗಿದೆ.
ಇನ್ ಪುಟ್ ಕ್ರೆಡಿಟ್ ಸಿಸ್ಟಮ್ ಮತ್ತು ಐಷಾರಾಮಿ, ಕ್ರೀಡಾ ವಾಹನಗಳಿಗೆ ಜಿಎಸ್ ಟಿ ದರವನ್ನು ಹೆಚ್ಚಳ ಮಾಡುವುದರ ಕುರಿತು ಚರ್ಚೆ ಆಗಲಿದೆ ಎಂದು ಹಣಕಾಸು ಸಚಿವಾಲಯ ಮೂಲಗಳು ತಿಳಿಸಿವೆ.
ಜಿಎಸ್ ಟಿ ಫೈಲಿಂಗ್ ಮಾಡುವಾಗ ಕೆಲವು ಸಮಸ್ಯೆ ಉದ್ಭವಿಸಿದೆ ಮತ್ತು ಜಿಎಸ್ ಟಿಎನ್ ನಲ್ಲಿಯೂ ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿವೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ, ಆದಾಯದ ಸಲ್ಲಿಕೆಯಲ್ಲಿನ ದೋಷಗಳು, ಸರಕು ಪಟ್ಟಿ ಹೊಂದಾಣಿಕೆಗಳು ಮತ್ತು ಸಾಲಗಳ ಪರಿವರ್ತನೆ ಈ ಎಲ್ಲದರಲ್ಲಿ ಕೆಲವು ಚಿಕ್ಕ ಸಮಸ್ಯೆಗಳು ಎದುರಾಗಿದೆ. "ಇಂದಿನ ಸಭೆಯಲ್ಲಿ ಇದರ ಕುರಿತು ಚರ್ಚಿಸಲಾಗುವುದು ಮತ್ತು ಈ ಸಮಸ್ಯೆಗಳಿಗೆ ಪರಿಹಾರವು ಸಭೆಯಿಂದ ಲಭಿಸುತ್ತದೆ ಎನ್ನುವ ನಿರೀಕ್ಷೆ ಇದೆ" ಎಂದು ಜಿಎಸ್ ಟಿ ಕೌನ್ಸಿಲ್ ಮೂಲಗಳು ತಿಳಿಸಿವೆ.
ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಜಿಎಸ್ ಟಿಎನ್ ನ್ನು ಮತ್ತಷ್ಟು ಉತ್ತಮಪಡಿಸಲಾಗುತ್ತದೆ ಎಂದು ಹೇಳಿದರು. ಆದಾಗ್ಯೂ, ಉದ್ಯಮ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ವಲಯ, ಜಿಎಸ್ ಟಿ ರಿಟರ್ನ್ ಅನ್ನು ಫೈಲ್ ಮಾಡಲು ಹೆಚ್ಚಿನ ಸಮಯವನ್ನು ಬಯಸಿದೆ
ಕ್ರೀಡಾ ವಾಹನಗಳು ಮತ್ತು ಐಷಾರಾಮಿ ಕಾರುಗಳಲ್ಲಿ 15% ರಷ್ಟು 25% ರಷ್ಟು ತೆರಿಗೆ ಹೆಚ್ಚಳಕ್ಕೆ ಸಭೆಯಲ್ಲಿ ನಿರ್ಣಯ ಕೈಗೊಳಳಲು ನಿರ್ಧರಿಸಲಾಗಿದೆ. ಈಗಾಗಲೇ, ಕೇಂದ್ರ ಸಚಿವ ಸಂಪುಟಈ ವಾಹನಗಳ ಮೇಲೆ ಸೆಸ್ ವಿಧಿಸುವ ಪ್ರಸ್ತಾಪವನ್ನು ಅಂಗೀಕರಿಸಿದೆ.
ಇಂದಿನ ಸಭೆಯಲ್ಲಿ ಚರ್ಚೆಗೆ ಬರಲಿರುವ ಇನ್ನೊಂದು ವಿಚಾರವೆಂದರೆ ಆಂಟಿ ಪ್ರೊಫ್ಟೀರಿಂಗ್ ಬಾಡಿ ಯ ಕಾರ್ಯಾಚರಿಸುವಿಕೆ ಆಗಿದೆ.
ಶನಿವಾರ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಕೆಲವು ಉತ್ಪನ್ನಗಳು ಮತ್ತು ಸೇವೆಗಳ ಮೇಲೆ ತೆರಿಗೆ ಕಡಿತಗೊಳಿಸಲು, ಸರ್ಕಾರದ ಯೋಜನೆಗಳಿಗೆ ತೆರಿಗೆ ವಿನಾಯಿತಿ, ಬೀಡಿ ಮತ್ತು ಗ್ರಾನೈಟ್ ಕೈಗಾರಿಕೆಗಳಿಗೆ ರಿಯಾಯಿತಿ, ಈ ಎಲ್ಲಾ ಅಂಶಗಳನ್ನು ಕುರಿತಂತೆ ಚರ್ಚಿಸಲಾಗುತ್ತದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ (ಆದಾಯ) ಸೋಮೇಶ್ ಕುಮಾರ್ ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos