ವಾಣಿಜ್ಯ

ಇನ್ಫೋಸಿಸ್ ಗೆ 24 ತಿಂಗಳಲ್ಲಿ ವಾರ್ಷಿಕವಾಗಿ 6,000 ಇಂಜಿನಿಯರ್ ಗಳ ನೇಮಕ: ಪ್ರವೀಣ್ ರಾವ್

Srinivas Rao BV
ನವದೆಹಲಿ: ಮಾರುಕಟ್ಟೆ ಸ್ಥಿತಿಗತಿಗಳನ್ನು ಆಧರಿಸಿ ಇನ್ಫೋಸಿಸ್ ಮುಂದಿನ 24 ತಿಂಗಳಲ್ಲಿ ವಾರ್ಷಿಕವಾಗಿ 6,000 ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲಿದೆ ಎಂದು ಸಂಸ್ಥೆಯ ಹಂಗಾಮಿ ಸಿಇಒ, ಎಂಡಿ ಯುಬಿ ಪ್ರವೀಣ್ ರಾವ್ ಹೇಳಿದ್ದಾರೆ. 
ಕಳೆದ ವಾರ ನಡೆದ ಹೂಡಿಕೆದಾರರ ಸಭೆಯಲ್ಲಿ ಮಾತನಾಡಿದ್ದ ಪ್ರವೀಣ್ ರಾವ್, ಯುರೋಪ್ ಹಾಗೂ ಅಮೆರಿಕ ಮಾರುಕಟ್ಟೆಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚಿಸುವುದಾಗಿ ಹೇಳಿದ್ದರು. ಇದೇ ವೇಳೆ ಉದ್ಯಮದಲ್ಲಿ ಹೆಚ್ಚುತ್ತಿರುವ ಆಟೋಮೇಷನ್ ಹಾಗೂ ಉದ್ಯೋಗ ಕಡಿತವಾಗುವ ಆತಂಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರವೀಣ್ ರಾವ್, ಪ್ರತಿ ವರ್ಷ ಒಂದು ಮಿಲಿಯನ್ ಪದವೀಧರರು ಹೊರಬರುತ್ತಾರೆ. ಅದು ಅತಿ ಹೆಚ್ಚು ಸಂಖ್ಯೆ ಎನಿಸಬಹುದು ಆದರೆ ಒಂದು ಮಿಲಿಯನ್ ಪೈಕಿ ಶೇ.20-30 ರಷ್ಟು ಮಾತ್ರ ಗುಣಮಟ್ಟದ ಪ್ರತಿಭೆ ಹೊಂದಿದ ವಿದ್ಯಾರ್ಥಿಗಳಾಗಿರುತ್ತಾರೆ ಎಂದು ಹೇಳಿದ್ದಾರೆ. 
ಇನ್ಫೋಸಿಸ್ ಸ್ಥಳೀಯ ಕಾರ್ಯಪಡೆಯನ್ನು ಹೆಚ್ಚಿಸಲು ಚಿಂತನೆ ನಡೆಸುತ್ತಿದ್ದು ಮುಂದಿನ ಕೆಲವು ವರ್ಷಗಳಲ್ಲಿ 10,000 ಜನರನ್ನು ನೇಮಕ ಮಾಡಿಕೊಳ್ಳಲಿದೆ. ಈ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಪ್ರವೀಣ್ ರಾವ್ ತಿಳಿಸಿದ್ದಾರೆ.   
SCROLL FOR NEXT