ಐಫೋನ್ ನ ಹೊಸ ಸರಣಿಯ ಫೋನ್ ಬಿಡುಗಡೆ ಕಾರ್ಯಕ್ರಮ 
ವಾಣಿಜ್ಯ

ಹೊಸ ಸರಣಿಯ ಐಫೋನ್ ಗಳ ಮಾರುಕಟ್ಟೆ ಪ್ರವೇಶದ ಬೆನ್ನಲ್ಲೇ ಐಪೋನ್ 7 ಸರಣಿಯ ಬೆಲೆ ಬಾರಿ ಇಳಿಕೆ!

ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆ್ಯಪಲ್ ತನ್ನ ಹೊಸ ಸರಣಿಯ ಐಪೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಹಳೆಯ ಸರಣಿಯ ಐಫೋನ್ ಗಳ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

ನವದೆಹಲಿ: ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆ್ಯಪಲ್ ತನ್ನ ಹೊಸ ಸರಣಿಯ ಐಪೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಹಳೆಯ ಸರಣಿಯ ಐಫೋನ್ ಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

ನಿನ್ನೆಯಷ್ಟೇ ಆ್ಯಪಲ್ ಸಂಸ್ಥೆ ತನ್ನ ಸ್ಟೀವ್ ಜಾಬ್ಸ್ ಆಡಿಟೋರಿಯಂ ನಲ್ಲಿ ಹೊಸ ಆವೃತ್ತಿಯ ಐಫೋನ್ 8 ಮತ್ತು ಐಫೋನ್ ಎಕ್ಸ್ ಸರಣಿಯ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಭಾರತದಲ್ಲೂ ಈ ಫೋನ್ ಗಳಿಗೆ  ಬೇಡಿಕೆ ಹೆಚ್ಚಾಗಿದ್ದು, ಕೇವಲ ಒಂದೇ ದಿನದಲ್ಲಿ ಹಳೆಯ ಆವೃತ್ತಿಯ ಐಫೋನ್ ಗಳ ಬೇಡಿಕೆ ಬಾರಿ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಮಾರಾಟ ಸಂಸ್ಥೆಗಳು ದಾಸ್ತಾನು ಖಾಲಿ ಮಾಡಲು ದರ ಇಳಿಕೆ ಮಾಡಲು ಮುಂದಾಗಿದ್ದು,  ಐಫೋನ್ 6, ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಸರಣಿಯ ಫೋನ್ ಗಳ ದರದಲ್ಲಿ ಬಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

ಮೂಲಗಳ ಪ್ರಕಾರ ಸುಮಾರು 9 ಸಾವಿರದಿಂದ 10 ಸಾವಿರ ರು.ಗಳ ವರೆಗೂ ದರ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ  ಕೂಡಾ ಆ್ಯಪಲ್ ಸಂಸ್ಥೆ ಐಫೋನ್‌ 7 ಮತ್ತು ಐಫೋನ್‌ 7 ಪ್ಲಸ್‌ ಬಿಡುಗಡೆ ವೇಳೆ ಅದರ  ಹಿಂದಿನ ಆವೃತ್ತಿಗಳ ಬೆಲೆಯನ್ನು ಕಡಿತಗೊಳಿಸಿತ್ತು. ಕಳೆದ ವರ್ಷ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ಸಂದರ್ಭದಲ್ಲಿ ಸಂಸ್ಥೆ ತನ್ನ (ಸ್ಟಾಕ್ ಕ್ಲಿಯರೆನ್ಸ್ ಸೇಲ್) ಹಲವು ಮೊಬೈಲ್‌ ಗಳಿಗೆ ಶೇ.4ರಿಂದ ಶೇ.7.5 ರಷ್ಟು ದರ  ಕಡಿತಗೊಳಿಸಿತ್ತು.

ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ ಐಫೋನ್ ನ ನೂತನ ಸರಣಿಯ ಮೊಬೈಲ್ ಬಿಡುಗಡೆಯಾದ ಬಳಿಕ 32 ಜಿಬಿ ಸಾಮರ್ಥ್ಯದ ಐಫೋನ್ 7 ಪ್ಲಸ್ ಬೆಲೆ ರೂ 59,000ಕ್ಕೆ ಇಳಿದಿದೆ. ಈ ಹಿಂದೆ ಇದೇ ಫೋನ್ ರೂ 67,300  ರೂ.ಗಳಷ್ಟಿತ್ತು.

ಉಳಿದಂತೆ ಐಫೋನ್ ನ ವಿವಿಧ ಸರಣಿಯ ನೂತನ ಮತ್ತು ಪರಿಷ್ಕರಿಸಿದ ಬೆಲೆ ಇಂತಿದೆ.
ಐಫೋನ್ 7 ಪ್ಲಸ್ (128 ಜಿಬಿ)
ಪ್ರಸ್ತುತ ಬೆಲೆ: ರೂ 68,000
ಹಿಂದಿನ ಬೆಲೆ: ರೂ 76,200

ಐಫೋನ್ 7 (32 ಜಿಬಿ)
ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 56,200

ಐಫೋನ್ 7 (128GB)
ಪ್ರಸ್ತುತ ಬೆಲೆ: ರೂ 58,000
ಹಿಂದಿನ ಬೆಲೆ: ರೂ 65,200

ಐಫೋನ್ 6 ಪ್ಲಸ್‌(32 ಜಿಬಿ)
ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 56,100

ಐಫೋನ್ 6s ಪ್ಲಸ್‌ (128 ಜಿಬಿ)
ಪ್ರಸ್ತುತ ಬೆಲೆ: ರೂ 58,000
ಹಿಂದಿನ ಬೆಲೆ: ರೂ 65,000

ಐಫೋನ್ 6 ಗಳು (32 ಜಿಬಿ)
ಪ್ರಸ್ತುತ ಬೆಲೆ: ರೂ 40,000
ಹಿಂದಿನ ಬೆಲೆ: ರೂ 46,900

ಐಫೋನ್‌ 6ಎಸ್ (128 ಜಿಬಿ)
ಪ್ರಸ್ತುತ ಬೆಲೆ: ರೂ 49,000
ಹಿಂದಿನ ಬೆಲೆ: ರೂ 55,900

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT