ಸಾಂದರ್ಭಿಕ ಚಿತ್ರ 
ವಾಣಿಜ್ಯ

ಸೇವಾ ಶುಲ್ಕದ ಮೇಲೆ ಹೊಟೇಲ್ ಗಳು ತೆರಿಗೆ ಪಾವತಿಸಲು ಕೇಂದ್ರ ಸರ್ಕಾರ ಸೂಚನೆ

ಟ್ಯಾಕ್ಸ್ ರಿಟರ್ನ್ಸ್ ಗಳ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಹೊಟೇಲ್ ಮತ್ತು ರೆಸ್ಟುರಾಂಟ್‍ಗಳು...

ನವದೆಹಲಿ: ಟ್ಯಾಕ್ಸ್ ರಿಟರ್ನ್ಸ್ ಗಳ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಹೊಟೇಲ್ ಮತ್ತು ರೆಸ್ಟುರಾಂಟ್‍ಗಳು ವಿಧಿಸುತ್ತಿರುವ ಸೇವಾ ಶುಲ್ಕವನ್ನು ಆದಾಯವೆಂದು ಪರಿಗಣಿಸಬೇಕೆಂದು, ನೇರ ತೆರಿಗೆಗಳ ಕೇಂದ್ರೀಯ ಮಂಡಳಿಗೆ, ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಪ್ರಸಕ್ತ, ಸೇವಾ ಶುಲ್ಕ ಪಾವತಿಸುವುದು ಗ್ರಾಹಕರಿಗೆ ಐಚ್ಛಿಕ ಎಂದು ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ ಕೂಡಾ, ಕೆಲವು ಹೋಟೆಲ್ ಗಳು ಹಾಗೂ ರೆಸ್ಟುರಾಂಟ್ ಗಳು ಶೇಕಡಾ 5 ರಿಂದ ಶೇಕಡಾ 20 ರವರೆಗೆ ಸೇವಾ ಶುಲ್ಕವನ್ನು
ವಿಧಿಸುತ್ತಿವೆ. ಹೆಸರಾಂತ ಹೋಟೆಲ್ ಹಾಗೂ ರೆಸ್ಟುರಾಂಟ್ ಗಳು ಮಾರ್ಗಸೂಚಿಗಳ ಅನುಸರಣೆ ಮಾಡುತ್ತಿವೆಯಾದರೂ, ಸೇವಾ ಶುಲ್ಕ ಕುರಿತಂತೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಮೂಲಕ ದೂರುಗಳು ಇನ್ನೂ ಬರುತ್ತಲೇ ಇವೆ ಎಂದು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.
ಸೇವಾಶುಲ್ಕದ ಕಾಲಂ ಅನ್ನು ಖಾಲಿಯಾಗಿ ಬಿಡಬೇಕು ಅಥವಾ ಅದು ಐಚ್ಛಿಕ ಎಂದು ಬಿಲ್ ನಲ್ಲಿ ನಮೂದಿಸಬೇಕೆಂದು ಹೋಟೆಲ್ ಹಾಗೂ ರೆಸ್ಟುರಾಂಟ್ ಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಸೇವಾ ಶುಲ್ಕ ವಿಧಿಸಬಾರದೆಂಬ ಮಾರ್ಗಸೂಚಿಗಳನ್ನು ಹೋಟೆಲ್ ಹಾಗೂ ರೆಸ್ಟುರಾಂಟ್‍ಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಜಾರಿ ಮಾಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!