ಬೆಂಗಳೂರು: ಮೂರು ತಿಂಗಳಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಅತ್ಯಧಿಕ ಏರಿಕೆ!
ಬೆಂಗಳೂರು ನಗರದಲ್ಲಿ ಸೆ.13 ರಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 71.47 ರೂಪಾಯಿಯಷ್ಟಾಗುವ ಮೂಲಕ 3 ತಿಂಗಳಲ್ಲೇ ಮೊದಲ ಬಾರಿಗೆ ಅತ್ಯಧಿಕ ಏರಿಕೆ ಕಂಡಿದೆ.
ಬೆಂಗಳೂರು: ಬೆಂಗಳೂರು ನಗರದಲ್ಲಿ ಸೆ.13 ರಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 71.47 ರೂಪಾಯಿಯಷ್ಟಾಗುವ ಮೂಲಕ 3 ತಿಂಗಳಲ್ಲೇ ಮೊದಲ ಬಾರಿಗೆ ಅತ್ಯಧಿಕ ಏರಿಕೆ ಕಂಡಿದೆ. ಇದಕ್ಕೂ ಮುನ್ನ ಜುಲೈ.3 ರಂದು ಪ್ರತಿ ಲೀಟರ್ ಪೆಟ್ರೋಲ್ ದರ 64.33 ರಷ್ಟಾಗಿತ್ತು.
ಈ ವರ್ಷದ ಜೂನ್ ನಿಂದ ಪೆಟ್ರೋಲ್ ದರಗಳು ಪ್ರತಿನಿತ್ಯ ಬದಲಾವಣೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಳಿತಕ್ಕೆ ಅನುಗುಣವಾಗಿ ಪ್ರತಿದಿನವೂ ಪೆಟ್ರೋಲ್ ದರ ಪರಿಷ್ಕೃತವಾಗುತ್ತಿದೆ. ಹೆಚ್ಚಿನ ಪರಿಷ್ಕೃತ ದರವನ್ನು ಗ್ರಾಹಕರ ಮೇಲೆ ಹೇರದೇ ಪೆಟ್ರೋಲಿಯಮ್ ಮಾರುಕಟ್ಟೆ ಸಂಸ್ಥೆಗಳೇ ಭರಿಸಲಿವೆ ಎಂದು ಪೆಟ್ರೋಲಿಯಂ ಡಿಲರ್ಸ್ ಅಸೋಸಿಯೇಷನ್ ನ ಸದಸ್ಯರೊಬ್ಬರು ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.