ಬೆಂಗಳೂರು : ರಾಜ್ಯದಲ್ಲಿ ಆಸ್ತಿ ಕೊಂಡೊಕೊಳ್ಳುವವರ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಏಪ್ರಿಲ್ 1 ರಿಂದ ರಿಯಲ್ ಎಸ್ಟೇಟ್ ಮತ್ತು ನಿಯಂತ್ರಣ ಪ್ರಾಧಿಕಾರ(ರೇರಾ) ಎಲ್ಲಾ ಆಸ್ತಿ ನೋಂದಣಿಗಳಿಗೂ ಕಾಯಂ ನೋಂದಣಿ ಸಂಖ್ಯೆ ನೀಡುವ ಪ್ರಕ್ರಿಯೆ ಆರಂಭಿಸಿದೆ.
ರಿಯಲ್ ಎಸ್ಟೇಟ್ ಬಿಲ್ಡರ್ ಗಳು ಪ್ರಾಧಿಕಾರದಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಿದ ನಂತರ ಯಾವುದೇ ಪ್ರತಿಕ್ರಿಯೆಗೂ ಕಾಯದೆ ರಿಯಲ್ ಎಸ್ಟೇಟ್ ಮಾರ್ಕೆಟ್ ಚಟುವಟಿಕೆಯಿಂದ ದೂರ ಸರಿಯುವುದು ಇದರಿಂದ ತಪ್ಪಿದಂತಾಗುತ್ತದೆ.
ರಿಯಲ್ ಎಸ್ಟೇಟ್ ಏಜೆಂಟ್ ಆದಷ್ಟು ಬೇಗ ನೋಂದಣಿ ಪ್ರಕ್ರಿಯೆಯನ್ನು ಆರಂಭಿ,ಸ್ವೀಕೃತಿ ಪತ್ರ ಅಥವಾ ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಬಿಲ್ಡರ್ ಗೆ ನೀಡಲಾಗುತ್ತದೆ.
ಯಾವುದೇ ಆಸ್ತಿ ಮಾರಾಟ ಅಥವಾ ಮಾರ್ಕೆಟಿಂಗೂ ಮುನ್ನಾ ಶಾಶ್ವತ ನೋಂದಣಿ ಸಂಖ್ಯೆ ಕಡ್ಡಾಯವಾಗಿರುತ್ತದೆ. ಅಂತಹ ತಾತ್ಕಾಲಿಕ ನೋಂದಣಿ ಸಂಖ್ಯೆಯ ಅಧಿಕೃತವೂ ಅಥವಾ ಅನಧಿಕೃತವೊ ಎಂಬುದನ್ನು ರೇರಾ ಪೋರ್ಟಲ್ ನ ಹೋಮ್ ಪೇಜ್ ನಿರ್ಧರಿಸುತ್ತದೆ.
ಪೋರ್ಟಲ್ ನಲ್ಲಿ ಯಾರು ನೋಂದಣಿಯಾಗಿರುತ್ತಾರೋ ಅಂತಹವರು ಸ್ವಯಂ ಚಾಲಿತವಾಗಿ ಸ್ವೀಕೃತಿ ಸಂಖ್ಯೆಯನ್ನು ಪಡೆಯಲಿದ್ದಾರೆ ಎಂದು ರೇರಾ ಅಧಿಕಾರಿಗಳು ತಿಳಿಸಿದ್ದಾರೆ.
ಖಾಯಂ ಆಸ್ತಿ ನಂಬರ್ ಗಾಗಿ ರೇರಾ ಪೋರ್ಟಲ್ ನಲ್ಲಿ ಸದ್ಯ, 1,466 ಯೋಜನೆಗಳು ನೋಂದಣಿಯಾಗಿವೆ. ಸ್ವೀಕರಿಸಲಾಗಿರುವ 2.55 ಯೋಜನೆಗಳ ಅರ್ಜಿಗಳ ಪೈಕಿ 1.466 ಅರ್ಜಿದಾರರಿಗೆ ಖಾಯಂ ನಂಬರ್ ನೀಡಲಾಗಿದೆ. 52 ತಿರಸ್ಕರಿಸಲಾಗಿದೆ ಎಂದು ಮತ್ತೊಬ್ಬ ರೇರಾ ಅಧಿಕಾರಿಗಳು ತಿಳಿಸಿದ್ದಾರೆ.