ಜಾಗತಿಕ ಇ ಕಾಮರ್ಸ್ ದೈತ್ಯ ಅಮೇಜಾನ್ ನಿಂದ ಫ್ಲಿಪ್ ಕಾರ್ಟ್ ಖರೀದಿಗೆ ಚಿಂತನೆ: ವರದಿ
ಜಾಗತಿಕ ಆನ್ ಲೈನ್ ಮಾರುಕಟ್ಟೆಯ ದೈತ್ಯ ಅಮೇಜಾನ್ ಡಾಟ್ ಕಾಂ, ಭಾರತೀಯ ಮೂಲದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಕರೀದಿಗೆ ಮುಂದಾಗ........
ಮುಂಬೈ: ಜಾಗತಿಕ ಆನ್ ಲೈನ್ ಮಾರುಕಟ್ಟೆಯ ದೈತ್ಯ ಅಮೇಜಾನ್ ಡಾಟ್ ಕಾಂ, ಭಾರತೀಯ ಮೂಲದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಕರೀದಿಗೆ ಮುಂದಾಗಬಹುದು ಎಂದು ಸ್ಥಳೀಯ ಮಾದ್ಯಮವೊಂದು ವರದಿ ಮಾಡಿದೆ.
ಆದರೆ ವಾಲ್ಮಾರ್ಟ್ ಇಂಕ್ ಜತೆಗೆ ಇದಾಗಲೇ ಫ್ಲಿಪ್ ಕಾರ್ಟ್ ಈ ಸಂಬಂಧ ಮಾತುಕತೆಗೆ ಮುಂದಾಗಿದೆ ಭಾರತದ ಏರುಗತಿಯ ಆನ್ ಲೈನ್ ವಹಿವಾಟಿನ ವಲಯದಲ್ಲಿ ಪ್ರಾಬಲ್ಯ ಸಾಧಿಸಲು ಅಮೆರಿಕಾ ಮೂಲದ ಈ ಎರಡೂ ಸಂಸ್ಥೆಗಳು ಪೈಪೋಟಿ ನಡೆಸಿದ್ದಾರೆ.
ತನ್ನ ಭಾರತೀಯ ಪ್ರತಿಸ್ಪರ್ಧಿ ಪ್ಲಿಪ್ ಕಾರ್ಟ್ ನ್ನು ಖರೀದಿಸಲು ಈ ಕೆಲವು ದಿನಗಳ ಹಿಂದೆಯೇ ಅಮೇಜಾನ್ ಮಾತುಕತೆಗೆ ಮುಂದಾಗಿತ್ತು. ಆದರೆ ಫ್ಲಿಪ್ ಕಾರ್ಟ್, ವಾಲ್ ಮಾರ್ಟ್ ಜತೆ ಮಾತುಕತೆ ನಡೆಸಲು ಹೆಚ್ಚು ಉತ್ಸುಕವಾಗಿದೆ ಎಂದು ಮಿಂಟ್ ದೈನಂದಿನ ಪತ್ರಿಕೆ ವರದಿ ಮಾಡಿದೆ.
ಫ್ಲಿಪ್ ಕಾರ್ಟ್ , ಅಮೇಜಾನ್ ನೊಡನೆ ಸೇರುವ ಸಾಧ್ಯತೆ ಕಡಿಮೆ ಇದೆ ಎಂದು ಈ ವಿಚಾರ ತಿಳಿದಿರುವ ಓರ್ವ ವ್ಯಕ್ತಿ ರಾಯ್ಟರ್ಸ್ ಗೆ ತಿಳಿಸಿದ್ದಾರೆ.ಪ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದಂತೆಯೇ ಅಂತಹ ವ್ಯವಹಾರವು ಏಕಸ್ವಾಮ್ಯವನ್ನುಂಟುಮಾಡುತ್ತದೆ ಎಂದು ಅವರು ಹೇಳಿದರು.
ಅಮೆಜಾನ್ ಹಾಗೂ ಫ್ಲಿಪ್ ಕಾರ್ಟವರನ್ನು ಈ ಸಂಬಂಧ ಪ್ರಶ್ನಿಸಲು ರಾಯ್ಟರ್ಸ್ ಯತ್ನಿಸಿದಾಗ ಅಮೆಜಾನ್ ಕಾಮೆಂಟ್ ಮಾಡಲು ನಿರಾಕರಿದೆ, ಹಾಗೆಯೇ ಫ್ಲಿಪ್ ಕಾರ್ಟ್ ಹಾಗೂ ವಾಲ್ ಮಾರ್ಟ್ ಸಹ ಪ್ರತಿಕ್ರಿಯೆ ನೀಡಿರಲಿಲ್ಲ.
ಫ್ಲಿಪ್ ಕಾರ್ಟ್ ನ 40 ಶೇ. ಪಾಲುದಾರಿಕೆಯನ್ನು ಖರೀದಿಸಲು ವಾಲ್ ಮಾರ್ಟ್ ಮುಂದಾಗಿದೆ ಎಂದು ರಾಯ್ಟರ್ಸ್ ಫೆಬ್ರುವರಿಯಲ್ಲಿ ವರದಿ ಮಾಡಿತ್ತು. ಇದು ಜಾಗತಿಕವಾಗಿ ಅತಿ ದೊಡ್ಡ ಇ-ಕಾಮರ್ಸ್ ಮಾರುಕಟ್ಟೆಯ ವ್ಯವಹಾರವಾಗಲಿದೆ. ಇದೊಮ್ಮೆ ಸಾಧ್ಯವಾದರೆ ಏಷ್ಯಾದ ಮೂರನೆಯ ಅತಿದೊಡ್ಡ ಆರ್ಥಿಕತೆಯಲ್ಲಿ ಅಮೆಜಾನ್ ಗೆ ನೇರ ಸವಾಲನ್ನು ಒಡ್ಡಲಿದೆ. ಅಮೇಜಾನ್ ಭಾರತದಲ್ಲಿ ಆನ್ ಲೈನ್ ಕಿರಾಣಿ ಸಾಮಾನು ವಿತರಣೆಗಾಗಿ 5 ಶತಕೋಟಿ ಡಾಲರ್ ಹೂಡಿಕೆ ಗೆ ಬದ್ದವಾಗಿದೆ.
ಫ್ಲಿಪ್ ಕಾರ್ಟ್ ನ ಬಹುತೇಕ ಪಾಲನ್ನು ವಾಲ್ ಮಾರ್ಟ್ ಖರೀದಿಸಲಿದೆ. ಒಪ್ಪಂದದ ಪ್ರಕಾರ ಪ್ರಾಥಮಿಕ ಮತ್ತು ದ್ವಿತೀಯ ಪಾಲು ಖರೀದಿಗಳ ಮೂಲಕ ಈ ವ್ಯವಹಾರ ನಡೆಯುತ್ತದೆ. ಭಾರತೀಯ ಸಂಸ್ಥೆಯನ್ನು 21 ಬಿಲಿಯನ್ ಡಾಲರ್ ಗಳಿಗೆ ವಾಲ್ ಮಾರ್ಟ್ ಖರೀದಿಸಲಿದೆ ಎಂದು ಮಿಂಟ್ ಹೇಳಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.