ವಾಣಿಜ್ಯ

ನಾಸ್ಕಾಂ ನೂತನ ಅಧ್ಯಕ್ಷರಾಗಿ ವಿಪ್ರೋದ ರಿಷದ್ ಪ್ರೇಮ್ ಜಿ ನೇಮಕ

Raghavendra Adiga
ಬೆಂಗಳೂರು: ಸಾಫ್ಟ್ ವೇರ್ ದಿಗ್ಗಜ ವಿಪ್ರೋದ ಮುಖ್ಯ ಕಾರ್ಯತಂತ್ರ ಅಧಿಕಾರಿ ರಿಷದ್ ಪ್ರೇಮ್ ಜೀ   2018-19ರನೂತನ  ನಾಸ್ಕಾಮ್ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ ಎಂದು ಭಾರತೀಯ ಐಟಿ ಉದ್ಯಮದ ಉನ್ನತ ಮೂಲಗಳು ತಿಳಿಸಿದೆ.
ಪ್ರಸಕ್ತ ನಾಸ್ಕಾಂ ಅಧ್ಯಕ್ಷರಾದ ರಮಣ್ ರಾಯ್ ಅವರ ಸ್ಥಾನಕ್ಕೆ ರಿಷದ್  ಪ್ರೇಮ್ ಜಿ ನೇಮಕವಾಗಲಿದ್ದಾರೆ ಎಂದು ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವಿಸಸ್ ಕಂಪನಿ(ನಾಸ್ಕಾಂ) ಹೇಳಿಕೆಯಲ್ಲಿ ತಿಳಿಸಿದೆ.
ರಿಷದ್, ವಿಪ್ರೋ  ಅಧ್ಯಕ್ಷ ಅಜೀಮ್ ಪ್ರೇಮ್ ಜೀ ಅವರ ಪುತ್ರರಾಗಿದ್ದಾರೆ.
ಮುಂಬೈ ಮೂಲದ ಜಾಗತಿಕ ವ್ಯಾಪಾರ ಪ್ರಕ್ರಿಯೆ ನಿರ್ವಹಣಾ ಕಂಪೆನಿ ಡಬ್ಲ್ಯುಎನ್ಎಸ್ ಗ್ಲೋಬಲ್ ಸರ್ವೀಸ್ ನ ಸಿಇಒ ಕೇಶವ ಮುರುಗೇಶ್ ಅವರು ಸಂಸ್ಥೆಯ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
SCROLL FOR NEXT