ವಾಣಿಜ್ಯ

ಹಲವು ರಾಜ್ಯಗಳಲ್ಲಿ ಎಟಿಎಂ ಸೇವೆ ಅಲಭ್ಯ: ನಗದು ಮುಗ್ಗಟ್ಟು ಎದುರಿಸುತ್ತಿರುವ ಜನತೆ

Srinivas Rao BV
ಹಲವು ರಾಜ್ಯಗಳಲ್ಲಿ ಎಟಿಎಂ ಸೇವೆ ಅಲಭ್ಯವಾಗಿದ್ದು, ಜನರು ತೀವ್ರವಾಗಿ ನಗದು ಮುಗ್ಗಟ್ಟು ಎದುರಿಸುತ್ತಿದ್ದಾರೆ. 
ವಿವಿಧ ಮೂಲಗಳ ಪ್ರಕಾರ ಗುಜರಾತ್ ನ ವಡೋದರದ ಹಲವು ಎಟಿಎಂ ಗಳಲ್ಲಿ ನಗದು ಮುಗ್ಗಟ್ಟು ಎದುರಾಗಿದ್ದು, ಕಾರ್ಯನಿರ್ವಹಿಸುತ್ತಿದ್ದ ಒಂದು ದಿನದಲ್ಲಿಯೂ ಸಹ ಎಟಿಎಂ ನಿಂದ ಕೇವಲ 10 ಸಾವಿರ ರೂಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 
ಗುಜರಾತ್ ನಲ್ಲಿ ಅಷ್ಟೇ ಅಲ್ಲದೇ ಮಧ್ಯಪ್ರದೇಶ, ದೆಹಲಿ, ಬಿಹಾರ, ತೆಲಂಗಾಣದಲ್ಲಿಯೂ ಇದೇ ಸ್ಥಿತಿ ಎದುರಾಗಿದ್ದು, ನಗದು ಮುಗ್ಗಟ್ಟು ಎದುರಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದಲೂ ಎಟಿಎಂ ಸೇವೆ ಲಭ್ಯವಾಗದೇ ನಗದು ಮುಗ್ಗಟ್ಟು ಎದುರಾಗಿದೆ. 
ಎಟಿಎಂ ಸೇವೆ ಅಲಭ್ಯವಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, 2016 ರ ನವೆಂಬರ್ ನಲ್ಲಿ ಎಟಿಎಂ ಗಳು ಖಾಲಿಯಾಗಿದ್ದವು, ಈಗಲೂ ಎಟಿಎಂ ಗಳು ಖಾಲಿಯಾಗಿವೆ. ಬಿಜೆಪಿ ಮಾತ್ರ ತನಗೆಷ್ಟು ಬೇಕೋ ಅಷ್ಟು ನಗದು ಹೊಂದಿದ್ದು, ಉಳಿದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
SCROLL FOR NEXT