ವಾಣಿಜ್ಯ

ನಗದು ಮುಗ್ಗಟ್ಟಿನ ಸಮಸ್ಯೆ ನಾಳೆ ಪರಿಹಾರವಾಗಲಿದೆ: ಎಸ್ ಬಿಐ ಮುಖ್ಯಸ್ಥ ರಜನೀಶ್ ಕುಮಾರ್

Srinivas Rao BV
ನವದೆಹಲಿ: ಕೆಲವು ರಾಜ್ಯಗಳಲ್ಲಿ ಎದುರಾಗಿರುವ ನಗದು ಮುಗ್ಗಟ್ಟಿನ ಸಮಸ್ಯೆಗೆ ಏ.20 ರ ವೇಳೆಗೆ ಅಂತ್ಯವಾಗಲಿದೆ ಎಂದು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ. 
ಕೆಲವು ಪ್ರದೇಶಗಳಲ್ಲಿ ಎಟಿಎಂ ಗಳಲ್ಲಿ ನಗಗು ಮುಗ್ಗಟ್ಟಿನ ಸಮಸ್ಯೆ ಎದುರಾಗಿದೆ. ಎಲ್ಲಾ ಪ್ರದೇಶಗಳಲ್ಲಿಯೂ ಈ ಸಮಸ್ಯೆ ಇಲ್ಲ.ನಗದು ಮುಗ್ಗಟ್ಟು ಎದುರಾಗಿರುವ ಪ್ರದೇಶಗಳಿಗೆ ನೋಟುಗಳನ್ನು ಕಳಿಸಿಕೊಡಲಾಗುತ್ತಿದ್ದು ಏ.20 ರಂದು ಕೊನೆಗೊಳ್ಳಲಿದೆ ಎಂದು ರಜನೀಶ್ ಕುಮಾರ್ ತಿಳಿಸಿದ್ದಾರೆ. 
ಏಪ್ರಿಲ್ ತಿಂಗಳ ಮೊದಲ 13 ದಿನಗಳಲ್ಲಿ ನಗದು ಮುಗ್ಗಟ್ಟು 45,000 ಕೋಟಿ ರೂಗಳಷ್ಟು ನಗದು ಎದುರಾಗಿತ್ತು. ನಗದು ಚಲಾವಣೆಯಲ್ಲಿರಬೇಕು, ಹಣ ತೆಗೆದುಕೊಂಡವರು ಅದನ್ನು ಚಲಾವಣೆ ಮಾಡದೇ ತಮ್ಮಲ್ಲಿಯೇ ಇಟ್ಟುಕೊಂಡರೆ ಈ ರೀತಿ ನಗದು ಮುಗ್ಗಟ್ಟು ಎದುರಾಗುತ್ತದೆ ಎಂದು ರಜನೀಶ್ ಕುಮಾರ್ ಹೇಳಿದ್ದಾರೆ. 
SCROLL FOR NEXT