ವಾಣಿಜ್ಯ

ಇಂಡಿಗೊ ಏರ್ ಲೈನ್ಸ್ ಅಧ್ಯಕ್ಷ ಸ್ಥಾನಕ್ಕೆ ಆದಿತ್ಯ ಘೋಷ್ ರಾಜಿನಾಮೆ

Lingaraj Badiger
ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ, ದೇಶದ ಅಗ್ಗದ ವಿಮಾನ ಯಾನ ಸಂಸ್ಥೆ ಇಂಡಿಗೊ, ಆದಿತ್ಯ ಘೋಷ್ ಅವರು ತನ್ನ ಅಧ್ಯಕ್ಷ ಸ್ಥಾನದಿಂದ ಮತ್ತು ಪೂರ್ಣಾವಧಿ ನಿರ್ದೇಶಕ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಶುಕ್ರವಾರ ಹೇಳಿದೆ.
ಇಂದು ನಡೆದ ಇಂಡಿಗೊ ಏರ್ ಲೈನ್ಸ್ ಮಂಡಳಿಯ ಸಭೆಯಲ್ಲಿ ಆದಿತ್ಯಘೋಷ್ ಅವರ ರಾಜಿನಾಮೆಯನ್ನು ಅಂಗೀಕರಿಸಲಾಗಿದ್ದು, ಇಂಡಿಗೊ ಪ್ರವರ್ತಕ ರಾಹುಲ್ ಭಾಟಿಯಾ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದೆ.
ಆದಿತ್ಯ ಘೋಷ್ ಅವರು ಪೂರ್ಣಾವಧಿ ನಿರ್ದೇಶಕ ಹುದ್ದೆ ನೀಡಿದ್ದ ರಾಜಿನಾಮೆ ಏಪ್ರಿಲ್ 26ರಿಂದ ಜಾರಿಗೆ ಬರುವಂತೆ ಅಂಗೀಕಾರಗೊಂಡಿದ್ದು, ಜುಲೈ 31ರ ವರೆಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಇಂಡಿಗೊ ತಿಳಿಸಿದೆ.
ಇಂಡಿಗೊ ದೇಶಿ ವಿಮಾನ ಯಾನ ಸಂಸ್ಥೆಯಲ್ಲಿ ಶೇ. 40ರಷ್ಟು ಪಾಲು ಹೊಂದಿದೆ.
SCROLL FOR NEXT