ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 26ನೇ ಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ 
ವಾಣಿಜ್ಯ

ಕೇಂದ್ರದಿಂದ ರೂ.7.41 ಲಕ್ಷ ಕೋಟಿ ಜಿಎಸ್‏ಟಿ, ರೂ.20 ಸಾವಿರ ಕೋಟಿ ಮೊತ್ತದ ಸೆಸ್ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಜಾರಿಯ ನಂತರ ಕಳೆದ ಆಗಸ್ಟ್ ನಿಂದ ಮಾರ್ಚ್ 2018ರವರೆಗೆ ...

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಜಾರಿಯ ನಂತರ ಕಳೆದ ಆಗಸ್ಟ್ ನಿಂದ ಮಾರ್ಚ್ 2018ರವರೆಗೆ ಭಾರತದಲ್ಲಿ 7.41 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ.

ಹಣಕಾಸು ವರ್ಷ ಕೊನೆಯ ಮಾರ್ಚ್ 31ರ ಹೊತ್ತಿಗೆ ಜಿಎಸ್ ಟಿ ಸಂಗ್ರಹ 7.41 ಟ್ರಿಲಿಯನ್ ನಷ್ಟಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಕಳೆದ ಆರ್ಥಿಕ ಸಾಲಿನ ಮಧ್ಯಭಾಗದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದು ಕೇವಲ 9 ತಿಂಗಳ ತೆರಿಗೆ ಸಂಗ್ರಹದ ಕುರಿತು ಲೆಕ್ಕ ಹಾಕಲಾಗಿದೆ. 2017-18ರಲ್ಲಿ ಆಗಸ್ಟ್ ನಿಂದ ಮಾರ್ಚ್ ವರೆಗೆ ಒಟ್ಟು ಆದಾಯ ಸಂಗ್ರಹ 7.19 ಲಕ್ಷ ಕೋಟಿಯಷ್ಟಾಗಿದೆ. ಅವುಗಳಲ್ಲಿ 1.19 ಲಕ್ಷ ಕೋಟಿ ಸಿಜಿಎಸ್ ಟಿ, 1.72 ಲಕ್ಷ ಕೋಟಿ ಎಸ್ ಜಿಎಸ್ ಟಿ, 3.66 ಲಕ್ಷ ಕೋಟಿ ಐಜಿಎಸ್ ಟಿ ಮತ್ತು 62,021 ಕೋಟಿ ರೂಪಾಯಿ ಸೆಸ್ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

ಕಳೆದ ಮಾರ್ಚ್ ತಿಂಗಳೊಂದರಲ್ಲಿಯೇ 24,000 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಅದು ಕಳೆದ ಎಂಟು ತಿಂಗಳಲ್ಲಿ ತಿಂಗಳ ಸರಾಸರಿ ಸಂಗ್ರಹ 89,000 ಕೋಟಿ ರೂಪಾಯಿಗಳಷ್ಟಾಗಿತ್ತು.

ಪ್ರಸಕ್ತ ಹಣಕಾಸು ವರ್ಷದಿಂದ ಸರ್ಕಾರ ನಗದು ಆಧಾರಿತ ಲೆಕ್ಕಪತ್ರ ನಿರ್ವಹಣೆಗೆ ವರ್ಗಾಯಿಸುತ್ತಿದ್ದು ಅಲ್ಲಿ ಒಂದು ತಿಂಗಳ ಪೂರ್ಣಗೊಂಡ ಆದಾಯವನ್ನು ದಾಖಲಿಸಲಾಗುತ್ತದೆ. ಅದಕ್ಕನುಗುಣವಾಗಿ ಏಪ್ರಿಲ್ ನ ಸಂಗ್ರಹ ಮೇ 1ಕ್ಕೆ ಬಿಡುಗಡೆಯಾಗಲಿದೆ.

ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ಕಳೆದ ವರ್ಷ ವ್ಯವಸ್ಥೆಯ ಸ್ಥಿರೀಕರಣಕ್ಕೆ ಆದ್ಯತೆ ನೀಡಲಾಗಿತ್ತು. ಈ ಹಣಕಾಸು ವರ್ಷದಿಂದ ಹಣಕಾಸು ಇಲಾಖೆಯ ಗಮನ ಅನುಸರಣೆ ಮತ್ತು ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದಾಗಿದೆ. ಈ ವರ್ಷ ತೆರಿಗೆ ಸಂಗ್ರಹ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಸರ್ಕಾರ ಸೆಸ್ ಮೂಲಕ ಸಂಗ್ರಹಿಸಿರುವ 20,000 ಕೋಟಿ ರೂಪಾಯಿಗಳನ್ನು ರಾಜ್ಯಗಳ ತೆರಿಗೆ ನಷ್ಟವನ್ನು ತುಂಬಲು ಬಳಸಿಕೊಳ್ಳಲಾಗುವುದು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT