ವಾಣಿಜ್ಯ

2025 ರ ವೇಳೆಗೆ ಭಾರತವಾಗಲಿದೆ 5 ಟ್ರಿಲಿಯನ್ ಡಾಲರ್ ಎಕಾನಮಿ!

Srinivas Rao BV
ನವದೆಹಲಿ: ಜಾಗತಿಕ ಆರ್ಥಿಕತೆ ಕುಸಿಯುತ್ತಿದ್ದರೂ ಭಾರತದ ಆರ್ಥಿಕತೆ ಮಾತ್ರ ಆಶಾದಾಯಕವಾಗಿದ್ದು, ಪ್ರಸ್ತುತ 2.6 ಟ್ರಿಲಿಯನ್ ಆರ್ಥಿಕತೆಯಾಗಿರುವ ಭಾರತ 2025 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
2007-14 ರ ವರೆಗೆ ಭಾರತದ ಜಿಡಿಪಿ 1 ಟ್ರಿಲಿಯನ್ ಡಾಲರ್ ನಿಂದ 2 ಟ್ರಿಲಿಯನ್ ಡಾಲರ್ ವರೆಗೂ ಬೆಳೆದಿದ್ದು, ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾದರೆ 2025 ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದು ಕಷ್ಟ ಸಾಧ್ಯವೇನು ಅಲ್ಲ. 
ಕಳೆದ ಕೆಲವು ವರ್ಷಗಳಿಂದ ಭಾರತ ಸರ್ಕಾರ ಕೈಗೊಂಡಿರುವ ಕೆಲವು ಸುಧಾರಣೆಗಳು ಈಗ ಫಲ ನೀಡಲು ಪ್ರಾರಂಭಿಸಿದ್ದು, ಭಾರತ ವಿಶ್ವದಲ್ಲೇ ವೇಗವಾಗಿ ಬೆಳವಣಿಗೆಯಾಗುತ್ತಿರುವ ಆರ್ಥಿಕತೆಯಾಗಿದೆ ಎಂದು ವಿಶ್ವಬ್ಯಾಂಕ್ ನಲ್ಲಿರುವ ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ. 
2018 ರಲ್ಲಿ ಭಾರತದ ಜಿಡಿಪಿ ಶೇ.7.4 ರಷ್ಟನ್ನೂ ದಾಟಿ ಬೆಳೆವಣಿಗೆಯಾಗುವ ನಿರೀಕ್ಷೆ ಇದ್ದು,  ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಭೂತಾನ್, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ರಾಷ್ಟ್ರಗಳ ಪೈಕಿ ಭಾರತವೇ ಬೆಳವಣಿಗೆಗೆ ಆಶಾಕಿರಣವಾದ ಪ್ರದೇಶವಾಗಿದೆ. ಭಾರತ 2025 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.
SCROLL FOR NEXT