ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಪ್ರಸ್ತವಾನೆ ಇಲ್ಲ: ಡಿಇಎ ಕಾರ್ಯದರ್ಶಿ
ನವದೆಹಲಿ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಪ್ರಸ್ತಾವನೆ ಇಲ್ಲ, ಪೆಟ್ರೋಲ್, ಡೀಸೆಲ್ ದರ ಅಂತಹ ಮಟ್ಟ ತಲುಪಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.
ಒಂದು ವಾರದಿಂದ ತೈಲ ಕಂಪನಿಗಳು ತೈಅಲ್ ದರವನ್ನು ಪರಿಷ್ಕರಣೆ ಮಾಡಿಲ್ಲ. ಆದರೆ ಪೆಟ್ರೋಲ್ ದರ ಈಗಾಗಲೇ 55 ತಿಂಗಳಲ್ಲೇ ಅತಿ ಹೆಚ್ಚು ಅಂದರೆ 74.63 ರೂಗಳಿಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತಿ ಲೀಟರ್ ಗೆ ದಾಖಲೆಯ 65.93 ರೂಪಾಯಿಗಳಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಗರ್ಗ್ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ರದ್ದುಗೊಳಿಸುವ ಪ್ರಸ್ತಾವನೆ ಇಲ್ಲ ಎಂದು ಸ್ಪಾಷ್ಟಪಡಿಸಿದ್ದಾರೆ.
ಸಬ್ಸಿಡಿ ನೀಡಲಾಗುತ್ತಿರುವ ಎಲ್ ಪಿಜಿ ದರಗಳು ತೀವ್ರವಾಗಿ ಏರಿಕೆಯಾದರೆ ತೈಲ ಬೆಲೆಗಳು ಸರ್ಕಾರದ ಆರ್ಥಿಕ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಬಹುದು, ಇದರ ಹೊರತಾಗಿ ಪರೋಕ್ಷ ಸಬ್ಸಿಡಿ ನೀಡಬೇಕಾದರೆ ಕಚ್ಚಾ ತೈಲ ಬೆಲೆ ನಿರ್ದಿಷ್ಟ ಮಟ್ಟವನ್ನು ತಲುಪಿರಬೇಕು, ಹಾಗಾದಲ್ಲಿ ಮಾತ್ರ ಅಬಕಾರಿ ಸುಂಕದ ಬಗ್ಗೆ ಯೋಚನೆ ಮಾಡಲು ಸಾಧ್ಯ ಎಂದು ಸುಭಾಷ್ ಚಂದ್ರ ಗರ್ಗ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics