ಮೆಹುಲ್ ಚೊಕ್ಸಿ-ನೀರವ್ ಮೋದಿ 
ವಾಣಿಜ್ಯ

ಚೊಕ್ಸಿ-ನೀರವ್ ಗೆ ಕ್ಲೀನ್ ಚಿಟ್ ನೀಡದ ಸೆಬಿ, ತನಿಖೆ ಮುಂದುವರಿಕೆ

ದೇಶಭ್ರಷ್ಟ ಉದ್ಯಮಿ ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತೆ ಪಡೆದು ಅಲ್ಲಿ ಹೂಡಿಕೆ ಮಾಡಲು ...

ನವದೆಹಲಿ: ದೇಶಭ್ರಷ್ಟ ಉದ್ಯಮಿ ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತೆ ಪಡೆದು ಅಲ್ಲಿ ಹೂಡಿಕೆ ಮಾಡಲು ನಿಯಂತ್ರಕ ಸೆಬಿ ಯಾವುತ್ತೂ ಕೂಡ ಕ್ಲೀನ್ ಚಿಟ್ ವರದಿ ನೀಡಿರಲಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಹಣದ ವಂಚನೆಗೆ ಸಂಬಂಧಪಟ್ಟಂತೆ ಸೆಬಿ ತನಿಖೆಯನ್ನು ಮುಂದುವರಿಸಿದೆ. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಲಕ್ಷಾಂತರ ಕೋಟಿ ರೂಪಾಯಿ ವಂಚನೆ ಎಸಗಿರುವ ಬಗ್ಗೆ ತನಿಖೆ ನಡೆಯುತ್ತಿದೆ.ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತ್ವ ನೀಡಿರುವ ಬಗ್ಗೆ ಕೂಡ ಸೆಬಿ ನೊಟೀಸ್ ಕಳುಹಿಸಿ ವಿಚಾರಣೆ ನಡೆಸಲು ಮುಂದಾಗಿದೆ.
 
ಕಳೆದ ವಾರ, ಆಂಟಿಗುವಾ ಮಾಧ್ಯಮವೊಂದು ವರದಿ ಮಾಡಿ ಕೆರೆಬಿಯನ್ ದೇಶವಾದ ಆಂಟಿಗುವಾದ ಹೂಡಿಕೆ ಘಟಕದ ನಾಗರಿಕತ್ವವನ್ನು(ಸಿಐಯು) ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ನಾಗರಿಕತ್ವ ನೀಡಿ ಅಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿತ್ತು. ಇದಕ್ಕೆ ಭಾರತದ ಕಡೆಯಿಂದ ಯಾವುದೇ ಆಕ್ಷೇಪ ಬಂದಿರಲಿಲ್ಲ ಎಂದು ಹೇಳಿತ್ತು.

ವರದಿಯಲ್ಲಿ ಹೇಳಿರುವಂತೆ ಸಿಐಯು ಭಾರತದ ಸೆಬಿಯಿಂದ ಪಡೆದುಕೊಂಡ ದಾಖಲೆಗಳ ಪ್ರಕಾರ 2014 ಮತ್ತು 2017ರಲ್ಲಿ ಚೊಕ್ಸಿ ಒಡೆತನದ ಕಾರ್ಪೊರೇಟ್ ಸಂಸ್ಥೆ ವಿರುದ್ಧ ತನಿಖೆ ಕೈಗೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ