ಏರ್ ಇಂಡಿಯಾ 
ವಾಣಿಜ್ಯ

ಸತತ ಐದನೇ ತಿಂಗಳು ಏರ್ ಇಂಡಿಯಾ ಸಿಬ್ಬಂದಿ ಸಂಬಳದಲ್ಲಿ ವಿಳಂಬ

ಸತತ ಐದನೇ ತಿಂಗಳು ಕೂಡಾ ಏರ್ ಇಂಡಿಯಾ ಸಂಸ್ಥೆಯ ಸಿಬ್ಬಂದಿಗೆ ಸಂಬಳ ನೀಡುವಲ್ಲಿ ವಿಳಂಬವಾಗಿದೆ.

ನವದೆಹಲಿ : ಸತತ ಐದನೇ ತಿಂಗಳು ಏರ್ ಇಂಡಿಯಾ ನೌಕರರ ಸಂಬಳ  ನೀಡುವಲ್ಲಿ ವಿಳಂಬವಾಗಿದೆ. ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿ  ಕೆಲಸ ಮಾಡುವ ನೌಕರರು  ಜುಲೈ  ತಿಂಗಳಿನ ಸಂಬಳವನ್ನು ಇನ್ನೂ ಪಡೆದುಕೊಂಡಿಲ್ಲ.

ಸಂಬಳ ವಿಳಂಬದಿಂದ  ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಭಾರತೀಯ ವಾಣಿಜ್ಯ ಪೈಲಟ್ ಅಸೋಸಿಯೇಷನ್  ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್  ದೀಪಂಕರ್ ಗುಪ್ತಾ  ಏರ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಸತತ ಐದನೇ ತಿಂಗಳು ಕೂಡಾ ಸಂಬಳದಲ್ಲಿ ವಿಳಂಬವಾಗಿದೆ. ನಿಮ್ಮಿಂದ  ಸ್ಪಷ್ಟೀಕರಣ ಮತ್ತು ಭರವಸೆ ನೀಡಿದ ನಂತರವೂ ನೌಕರರಿಗೆ ನಿಗದಿತ ಅವಧಿಯಲ್ಲಿ ಸಂಬಳ ಹಾಗೂ ಭತ್ಯೆ  ನೀಡುವಲ್ಲಿ ಆಡಳಿತ ಸಂಸ್ಥೆ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

ಸಂಬಳ ವಿಳಂಬದಿಂದಾಗಿ ನೌಕರರು ಹಣಕಾಸು ಸಂಸ್ಥೆಗಳಿಂದ ಹಣ ಸಾಲ ಪಡೆದು ತೊಂದರೆ ಎದುರಿಸುವಂತಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!