ವಯಸ್ಸು ಕೇವಲ 7 ವರ್ಷ, ಗಳಿಸಿದ್ದು 155 ಕೋಟಿ ರೂಪಾಯಿ! ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ 
ವಾಣಿಜ್ಯ

ವಯಸ್ಸು ಕೇವಲ 7 ವರ್ಷ, ಗಳಿಸಿದ್ದು 155 ಕೋಟಿ ರೂಪಾಯಿ! ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಈ ವರ್ಷ ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಟಾರ್ಸ್ ಗಳ ಬಗ್ಗೆ ಫೋರ್ಬ್ಸ್ ಪಟ್ಟಿಯನ್ನು ನೋಡಿದ ಹಲವು ಯುವಕರಿಗೆ ದಿಗ್ಭ್ರಮೆಯಾಗುವಂತಹ ಸುದ್ದಿಯೊಂದಿದೆ.

ಈ ವರ್ಷ ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಟಾರ್ಸ್ ಗಳ ಬಗ್ಗೆ ಫೋರ್ಬ್ಸ್ ಪಟ್ಟಿಯನ್ನು ನೋಡಿದ ಹಲವು ಯುವಕರಿಗೆ ದಿಗ್ಭ್ರಮೆಯಾಗುವಂತಹ ಸುದ್ದಿಯೊಂದಿದೆ. ಕಾರಣವೇನೆಂದರೆ ಅದು 7 ವರ್ಷದ ಬಾಲಕನ ಸಾಧನೆ.
ರಯಾನ್ ಎಂಬ 7 ವರ್ಷದ ಬಾಲಕ ಯೂಟ್ಯೂಬ್ ಚಾನಲ್ ನಲ್ಲಿ ರಯಾನ್ ಟಾಯ್ಸ್ ರಿವ್ಯೂ ಚನಲ್ ಹೊಂದಿದ್ದು, 17 ಮಿಲಿಯನ್ ಚಂದಾದಾರರಿದ್ದಾರೆ. ಟಾಯ್ಸ್ ರಿವ್ಯೂ ಇಂದಲೇ ರಯಾನ್ ಒಂದು ವರ್ಷದಲ್ಲಿ 155 ಕೋಟಿ ರೂಪಾಯಿ ಗಳಿಸಿದ್ದು, ಈ ಚಾನಲ್ ನಲ್ಲಿ HUGE EGGS Surpise Toys Challenge with Inflatable water slide ಎಂಬ ಒಂದೇ ಒಂದು ವಿಡಿಯೋವನ್ನು 1.6 ಬಿಲಿಯನ್ ಜನರು ವೀಕ್ಷಿಸಿದ್ದಾರೆ. 
ಕಳೆದ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ರಯಾನ್ ಟಾಪ್ 8 ನೇ ಸ್ಥಾನದಲ್ಲಿದ್ದು  2017 ರ ಜೂ.1 ರಿಂದ 2018 ರ ಜೂನ್ 1 ವರೆಗೆ ಬರೊಬ್ಬರಿ 155 ಕೋಟಿ ರೂಪಾಯಿ ಗಳಿಸುವ ಮೂಲಕ ಈ ವರ್ಷ ಮೊದಲ ಸ್ಥಾನದಲ್ಲಿದ್ದಾರೆ. ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ಸ್ ಅಪ್ಲೋಡ್ ಮಾಡುವ ವಿಡಿಯೋಗಳಿಗೆ ನಿರ್ದಿಷ್ಟ ಸಂಖ್ಯೆಯ ವೀಕ್ಷಕರು ಬಂದಲ್ಲಿ ಹಣ ಗಳಿಸಬಹುದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

IPL 2026 Qualifier 1: ಐಪಿಎಲ್ ಇತಿಹಾಸದ ಅತ್ಯಪರೂಪದ ದಾಖಲೆ ಬರೆದ Virat Kohli; ಡಬಲ್ ಆಘಾತ ಕೊಟ್ಟ Holder

ಕರ್ನಾಟಕ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆ; ಜೂನ್ 18 ರಂದು ಮತದಾನ

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು ಮೆಟ್ರೋ ಸಂಚಾರ ವ್ಯತ್ಯಯ!

SCROLL FOR NEXT