ವಾಣಿಜ್ಯ

ನಾಳೆ ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ, ಹಣಕಾಸು ವಹಿವಾಟಿನಲ್ಲಿ ವ್ಯತ್ಯಯ

Lingaraj Badiger
ನವದೆಹಲಿ: ಬ್ಯಾಂಕ್ ಆಫ್ ಬರೋಡಾದೊಂದಿಗೆ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಗಳ ವಿಲೀನವನ್ನು ವಿರೋಧಿಸಿ ಬುಧವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಹಣಕಾಸು ವಹಿವಾಟಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕಳೆದ ಶುಕ್ರವಾರವಷ್ಟೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಅಧಿಕಾರಿಗಳು ವೇತನ ಸೆಟ್ಲಮೆಂಟ್‌ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ನಡೆಸಿದ್ದರು. ಇದರ ಬೆನ್ನಲ್ಲೇ ಈಗ ಬ್ಯಾಂಕ್‌ ಸಿಬ್ಬಂದಿ ನಾಳೆ ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕ್ ಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದ್ದು, ಖಾಸಗಿ ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಮೂರು ಬ್ಯಾಂಕ್‌ಗಳ ವಿಲೀನ ಯೋಜನೆಯು ಜನವರಿ ಮೊದಲ ವಾರದಲ್ಲಿ ಸಂಸತ್ತಿನ ಮುಂದೆ ಬರಲಿದೆ. ಎಲ್ಲ ಪ್ರಕ್ರಿಯೆಗಳೂ ನಿರೀಕ್ಷೆಯಂತೆ ನಡೆದರೆ, ಹೊಸ ವರ್ಷದಲ್ಲಿ ಬೃಹತ್‌ ಬ್ಯಾಂಕ್‌ ತಲೆ ಎತ್ತಲಿದೆ. ಇದು ದೇಶದ ಮೂರನೇ ದೊಡ್ಡ ಬ್ಯಾಂಕ್‌ ಆಗಲಿದೆ. 
SCROLL FOR NEXT