ವಾಣಿಜ್ಯ

ಟ್ವಿಟರ್ ಇಂಡಿಯಾದಲ್ಲಿ ಬಜೆಟ್ ಗೆ ಸಂಬಂಧಿಸಿದ 14 ಲಕ್ಷ ಪೋಸ್ಟ್ ದಾಖಲು!

Srinivas Rao BV
ನವದೆಹಲಿ: ಜ.26 ರಿಂದ ಫೆ.2 ರವರೆಗೆ ಟ್ವಿಟರ್ ನ ಭಾರತದ ವಿಭಾಗದಲ್ಲಿ ಬರೊಬ್ಬರಿ 14 ಲಕ್ಷ ಪೋಸ್ಟ್ ದಾಖಲಾಗಿದ್ದು, ಆರೋಗ್ಯ ಸೇವೆ ಹಾಗೂ ನೋಟು ನಿಷೇಧ ಅತಿ ಹೆಚ್ಚು ಚರ್ಚೆಯಾದ ವಿಷಯಗಳಾಗಿವೆ. 
ಭಾರತದ ಬಜೆಟ್ ಬಗ್ಗೆ ಟ್ವಿಟರ್ ನಲ್ಲಿ ಜಾಗತಿಕ ಮಟ್ಟದ ಚರ್ಚೆಯಾಗಿದ್ದು, ಜನಪ್ರಿಯ ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಜೆಟ್ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ 83,000 ಟ್ವೀಟ್ ಗಳು ಪೋಸ್ಟ್ ಆಗಿವೆ ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ.
ಹಣಕಾಸು ಸಚಿವಾಲಯ ಸಹ ಬಜೆಟ್ 2018 ಹ್ಯಾಷ್ ಟ್ಯಾಗ್ ಮೂಲಕ ಸಾರ್ವಜನಿಕರಿಗೆ ಲೈವ್ ಅಪ್ ಡೇಟ್ಸ್ ನೀಡುತ್ತಿತ್ತು, ಬಜೆಟ್ ದಿನದಂದು ಆರೋಗ್ಯ ಸೇವೆ, ನೋಟು ನಿಷೇಧ, ವೈಯಕ್ತಿಕ ಆದಾಯ ತೆರಿಗೆ ಮಿತಿ, ಜಿಎಸ್ ಟಿ ವಿಷಯಗಳು ಅತಿ ಹೆಚ್ಚು ಚರ್ಚೆಗೊಳಗಾದ ವಿಷಯಗಳಾಗಿವೆ ಎಂದು ಟ್ವಿಟರ್ ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಿದೆ. ಜನವರಿ ತಿಂಗಳಲಿ ಬಜೆಟ್ ಗೆ ಸಂಬಂಧಿಸಿದಂತೆ 240,000 ಟ್ವೀಟ್ ಗಳಾಗಿದ್ದವು, ಈ ಅಂಕಿ-ಅಂಶಗಳು ಕಳೆದ ಡಿಸೆಂಬರ್ ನಲ್ಲಾಗಿದ್ದ ಟ್ವೀಟ್ ಗಳಿಗಿಂತ ಎರಡರಷ್ಟು ಎಂದು ತಿಳಿದುಬಂದಿದೆ. 
SCROLL FOR NEXT