ವಾಣಿಜ್ಯ

ಇತ್ತ ಭಾರತ, ಅತ್ತ ಅಮೆರಿಕ ಷೇರುಪೇಟೆಯಲ್ಲೂ ತಲ್ಲಣ, 1000 ಅಂಕಗಳ ಕುಸಿತ

Srinivasamurthy VN
ವಾಷಿಂಗ್ಟನ್: ಇತ್ತ ಭಾರತೀಯ ಷೇರುಮಾರುಕಟ್ಟೆ ಬೆನ್ನಲ್ಲೇ ಅತ್ತ ಅಮೆರಿಕ ಷೇರುಪೇಟೆಯಲ್ಲೂ ಕೂಡ ಭಾರಿ ಪ್ರಮಾಣದ ಕುಸಿತ ಕಂಡುಬಂದಿದ್ದು, ಒಂದೇ ಅಮೆರಿಕ ಷೇರುಮಾರುಕಟ್ಟೆ 1000 ಅಂಕಗಳ ಕುಸಿತ ಕಂಡಿದೆ.
ಕಳೆದ 2 ವಹಿವಾಟುಗದಳಲ್ಲಿ ಅಮೆರಿಕ ಮಾರುಕಟ್ಟೆ ಬರೊಬ್ಬರಿ 2100 ಅಂಕಗಳ ಕುಸಿತ ಕಂಡಿದ್ದು, ಶೇ.8ರಷ್ಟು ನಷ್ಟ ಅನುಭವಿಸಿದೆ. ನಿನ್ನೆಯ ವಹಿವಾಟಿನಲ್ಲಿ 500 ಅಂಕಗಳನ್ನು ಕಳೆದುಕೊಂಡಿದ್ದ ಸೂಚ್ಯಂಕ ಇಂದು ಬರೊಬ್ಬರಿ 1000  ಅಂಕಗಳ ಇಳಿಕೆ ಕಂಡಿದೆ. ಷೇರುಪೇಟೆಯ ನಷ್ಟಕ್ಕೆ ಅಮೆರಿಕ ಫೆಡರಲ್ ಬ್ಯಾಂಕ್ ಕೈಗೊಂಡಿದ್ದ ಇತ್ತೀಚೆಗಿನ ನಿಯಮಗಳೇ ಕಾರಣ ಎಂದು ಹೇಳಲಾಗುತ್ತಿದ್ದು, ಮುಂದಿನ 2 ದಿನಗಳ ಕಾಲ ಕುಸಿತ ಮುಂದುವರೆಯುವ ಸಾಧ್ಯತೆ ಇದೆ  ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಅಮೆರಿಕ ಷೇರುಪೇಟೆ ಇತಿಹಾಸದಲ್ಲಿ ಕೊನೆಯ ಬಾರಿಗೆ ಅಂದರೆ 2008ರಲ್ಲಿ ಗರಿಷ್ಟ ಅಂಕಗಳ ಇಳಿಕೆಯಾಗಿತ್ತು. ಸೆಪ್ಟೆಂಬರ್ 29 2008ರಂದು ಅಮೆರಿಕ ಮಾರುಕಟ್ಟೆ ಸೂಚ್ಯಂಕ 777.68 ಅಂಕಗಳನ್ನು ಕಳೆದುಕೊಂಡಿತ್ತು. 
SCROLL FOR NEXT