ಮುಂಬೈ: ದಶಕದ ಕುಸಿತ ಮತ್ತು ಬಜೆಟ್ ಕುರಿತ ವ್ಯತಿರಿಕ್ತ ಪರಿಣಾಮದಿಂದಾಗಿ ಸತತ ನಾಲ್ಕು ದಿನ ಕುಸಿತ ಕಂಡಿದ್ದ ಭಾರತೀಯ ಷೇರುಮಾರಕಟ್ಟೆ ಬುಧವಾರ ಚೇತರಿಕೆಯತ್ತ ಮುಖ ಮಾಡಿದ್ದು, ಬುಧವಾರ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 238.41 ಅಂಕಗಳ ಏರಿಕೆ ಕಂಡಿದೆ.
ಜಾಗತಿಕ ಸಕಾರಾತ್ಮಕ ಮಾರುಕಟ್ಟೆ ವಹಿವಾಟು ಮತ್ತು ಅಮೆರಿಕ ಷೇರುಪೇಟೆಯಲ್ಲಿನ ಚೇತರಿಕೆ ಏಷ್ಯನ್ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಇಂದು 238.41 ಅಂಕಗಳ ಏರಿಕೆ ಕಂಡಿದೆ ಆ ಮೂಲಕ 34, 434 ಅಂಕಗಳಿಗೆ ಸೆನ್ಸೆಕ್ಸ್ ಏರಿಕೆಯಾಗಿದ್ದು, ನಿಫ್ಟಿ 89.50 ಅಂಕಗಳ ಏರಿಕೆಯೊಂದಿಗೆ 10, 587 ಅಂಕಗಳಿಗೇರಿದೆ.
ಕಳೆದ ಗುರವಾರದಿಂದ ಆರಂಭವಾಗಿದ್ದ ಭಾರತೀಯ ಮಾರುಕಟ್ಟೆಯ ಇಳಿಕೆ ಮಂಗಳವಾರದವರೆಗೂ ಮುಂದುವರೆದಿತ್ತು. ಮಂಗಳವಾರ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಕುಸಿದಿದ್ದ ಸೆನ್ಸೆಕ್ಸ್, ಬರೊಬ್ಬರಿ 1200 ಅಂಕಗಳ ಕುಸಿತ ಕಂಡಿತ್ತು. ಆ ಮೂಲಕ ಭಾರತೀಯ ಷೇರುಮಾರುಕಟ್ಟೆಗೆ ಒಂದೇ ದಿನ ಬರೊಬ್ಬರಿ 4 ಲಕ್ಷ ಕೋಟಿ ನಷ್ಟ ಸಂಭವಿಸಿತ್ತು.