ವಾಣಿಜ್ಯ

ಮುಂಬೈ ವಿಶ್ವದಲ್ಲಿ 12ನೇ ಶ್ರೀಮಂತ ನಗರ; ಒಟ್ಟು ಸಂಪತ್ತು 950 ಶತಕೋಟಿ ಡಾಲರ್

Sumana Upadhyaya
ನವದೆಹಲಿ: ಭಾರತದ ವಾಣಿಜ್ಯ ನಗರಿ ಮುಂಬೈ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಸಂಪನ್ಮೂಲ 950 ಶತಕೋಟಿ ಡಾಲರ್ ಹೊಂದುವ ಮೂಲಕ 15 ಶ್ರೀಮಂತ ನಗರಗಳಲ್ಲಿ ಸ್ಥಾನ ಪಡೆದಿದ್ದು, ನ್ಯೂಯಾರ್ಕ್ ಸಿಟಿ ಮುಂಚೂಣಿಯಲ್ಲಿದೆ.
ನ್ಯೂ ವರ್ಲ್ಡ್ ವೆಲ್ತ್ ಸಲ್ಲಿಸಿರುವ ವರದಿಯಲ್ಲಿ ಭಾರತದ ವಾಣಿಜ್ಯ ನಗರಿ ವಿಶ್ವದಲ್ಲಿ 12ನೇ ಶ್ರೀಮಂತ ನಗರವಾಗಿದ್ದು ನಂತರದ ಸ್ಥಾನಗಳಲ್ಲಿ ಟೊರೊಂಟೊ(944 ಶತಕೋಟಿ ಡಾಲರ್ ), ಫ್ರಾಂಕ್ ಫರ್ಟ್ (14ನೇ ಸ್ಥಾನದಲ್ಲಿ 912 ಶತಕೋಟಿ ಡಾಲರ್) ಮತ್ತು ಪ್ಯಾರಿಸ್ (15ನೇ ಸ್ಥಾನದಲ್ಲಿ 860 ಶತಕೋಟಿ ಡಾಲರ್) ಸಂಪತ್ತನ್ನು ಹೊಂದಿವೆ.
ಪ್ರತಿ ನಗರಗಳಲ್ಲಿ ವಾಸಿಸುತ್ತಿರುವ ನಾಗರಿಕರ ವೈಯಕ್ತಿಕ ಸಂಪತ್ತನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಇದರಲ್ಲಿ ವ್ಯಕ್ತಿಗಳ ಆಸ್ತಿ, ನಗದು, ಷೇರುಮಾರುಕಟ್ಟೆಯಲ್ಲಿನ ವಹಿವಾಟು, ವಾಣಿಜ್ಯ ಹಿತಾಸಕ್ತಿಗಳನ್ನು ಒಳಗೊಂಡಿರುತ್ತದೆ. ಸರ್ಕಾರದ ಹಣ ಇದರಿಂದ ಹೊರತಾಗಿದೆ.
ಶತಕೋಟಿದಾರರನ್ನು ಹೊಂದಿರುವ 10 ನಗರಗಳಲ್ಲಿ ಕೂಡ ಮುಂಬೈ ಇದೆ. ಮುಂಬೈ ನಗರದಲ್ಲಿ ಸುಮಾರು 28 ಶತಕೋಟಿ ಸಂಪತ್ತನ್ನು ಹೊಂದಿರುವವರಿದ್ದಾರೆ.
ಮುಂಬೈ ನಗರದಲ್ಲಿ ವಾಸಿಸುತ್ತಿರುವವರ ಒಟ್ಟಾರೆ ಸಂಪತ್ತು 950 ಶತಕೋಟಿ ಡಾಲರ್ ಆಗಿದೆ. ಮುಂಬೈ ಭಾರತದ ಆರ್ಥಿಕ ಕೇಂದ್ರವಾಗಿದೆ. ಮುಂಬೈ ಶೇರು ಮಾರುಕಟ್ಟೆಯ ನೆಲೆಯಾಗಿದೆ. ಇದು ವಿಶ್ವದಲ್ಲಿಯೇ 12ನೇ ಅತಿದೊಡ್ಡ ಷೇರು ಮಾರುಕಟ್ಟೆ ವಿನಿಮಯ ಕೇಂದ್ರವಾಗಿದೆ. ಹಣಕಾಸು ಸೇವೆ, ರಿಯಲ್ ಎಸ್ಟೇಟ್ ಮತ್ತು ಮಾಧ್ಯಮಗಳು ಹೆಚ್ಚಾಗಿ ಇರುವುದು ಮುಂಬೈ ನಗರದಲ್ಲಿ.
ಮುಂದಿನ ಹತ್ತು ವರ್ಷಗಳಲ್ಲಿ ಸಂಪತ್ತಿನ ಏರಿಕೆಯಲ್ಲಿ ಕೂಡ ಮುಂಬೈ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. ವಿಶ್ವದ ಅತಿ ಹೆಚ್ಚು ಸಂಪತ್ತು ಹೊಂದಿರುವ ನಗರಗಳಲ್ಲಿ ಲಂಡನ್ 2.7 ಟ್ರಿಲಿಯನ್ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿ, ನಂತರ ಟೊಕಿಯೊ(2.5 ಟ್ರಿಲಿಯನ್ ಡಾಲರ್), ಸ್ಯಾನ್ ಫ್ರಾನ್ಸಿಸ್ಕೊ ಬೆ ಪ್ರದೇಶ (2.3 ಟ್ರಿಲಿಯನ್ ಡಾಲರ್) ಹೊಂದಿದೆ. 
ನಂತರದ ಸ್ಥಾನಗಳಲ್ಲಿ ಬೀಜಿಂಗ್, ಶಾಂಘೈ, ಲಾಸ್ ಏಂಜಲೀಸ್, ಹಾಂಗ್ ಕಾಂಗ್, ಸಿಂಗಾಪುರ ಮತ್ತು ಚಿಕಾಗೊ ನಗರಗಳು ಇವೆ.
ವರದಿಯಲ್ಲಿ ವಿಶ್ವದ ಅತಿ ಹೆಚ್ಚು ಸಂಪತ್ತುಗಳ ನಗರಿಗಳ ಪಟ್ಟಿಯಲ್ಲಿ ಹೂಸ್ಟನ್, ಜೆನೆವಾ, ಒಸಕಾ, ಸಿಯೋಲ್, ಷೆನ್ಜೆನ್, ಮೆಲ್ಬರ್ನ್, ಜುರಿಚ್ ಮತ್ತು ಡಲ್ಲಾಸ್ ಗಳು ಕಣ್ಮರೆಯಾಗಿವೆ.
SCROLL FOR NEXT