ನವದೆಹಲಿ: ಜನವರಿ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ.5 .07 ಕ್ಕೆ ಇಳಿಕೆಯಾಗಿದೆ. ಡಿ.2017 ರ ಚಿಲ್ಲರೆ ಹಣದುಬ್ಬರ ಶೇ. 5 .21 ರಷ್ಟಿತ್ತು.
ಫೆ. 12 ರಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಜನವರಿ ತಿಂಗಳ ಹಣದುಬ್ಬರ ಶೇ.5.07 ಕ್ಕೆ ಇಳಿಕೆಯಾಗಿದ್ದು, ವರ್ಷದಿಂದ ಮತ್ತೊಂದು ವರ್ಷಕ್ಕೆ ಚಿಲ್ಲರೆ ಹಣದುಬ್ಬರ ಕಳೆದ ತಿಂಗಳಲ್ಲಿ ಶೇ.೩.೧೭ ರಷ್ಟಿತ್ತು.