ವಾಣಿಜ್ಯ

ಮುಂಬೈನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಭಾರಿ ವಂಚನೆ: 11,360 ಕೋಟಿ ರೂ. ಮೊತ್ತದ ಅವ್ಯವಹಾರ ಪತ್ತೆ

Nagaraja AB

ಮುಂಬೈ: ಮುಂಬೈನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸುಮಾರು 11, 360 ಕೋಟಿ ರೂ. ಮೊತ್ತದ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ.

ಕೆಲವೇ ಆಯ್ದು ಗ್ರಾಹಕರೊಂದಿಗೆ ಸ್ಪಷ್ಟವಾದ ಒಪ್ಪಂದ ಮಾಡಿಕೊಂಡು ಅನುಕೂಲ  ಮಾಡಿಕೊಟ್ಟಿರುವುದು ಬ್ಯಾಂಕ್ ವಹಿವಾಟು ಹೇಳಿಕೆಯಿಂದ ತಿಳಿದುಬಂದಿದೆ. ಇದರ ಆಧಾರದ ಮೇಲೆ ವಿದೇಶದಲ್ಲಿರುವ ಗ್ರಾಹಕರಿಗೆ ಇನ್ನೀತರ ಬ್ಯಾಂಕ್ ಗಳಲ್ಲಿ ಮುಂಗಡ ಹಣ ನೀಡಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಬ್ಯಾಂಕ್ ಹೇಳಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್  ದೇಶದ ಎರಡನೇ ರಾಜ್ಯಸರ್ಕಾರಿ ಸಹಭಾಗಿತ್ವದ ಬ್ಯಾಂಕ್ ಆಗಿದೆ. ಎಲ್ಲಾ ಆಸ್ತಿಗಳಿಂದ ನಾಲ್ಕನೇ ದೊಡ್ಡ ಬ್ಯಾಂಕ್ ಆಗಿದೆ.ಈ ಅವ್ಯವಹಾರದ ಪ್ರಕರಣದಲ್ಲಿ ಭಾಗಿಯಾಗಿರುವ ಗ್ರಾಹಕರ ಹೆಸರನ್ನು ಬ್ಯಾಂಕ್ ತಿಳಿಸಿಲ್ಲ. ಈ ಬಗ್ಗೆ ಕಾನೂನು ಜಾಗೃತ ಸಂಸ್ಥೆಗೆ ಮಾಹಿತಿ ತಿಳಿಸಲಾಗಿದೆ. ವಹಿವಾಟಿನ ನಂತರ ಅಕ್ರಮ ನಡೆದಿದ್ದರೆ ಅದು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಇಂದು ಮುಂಜಾನೆಯ ವಹಿವಾಟಿನಲ್ಲಿ  ಪಂಜಾಬ್ ನ್ಯಾಷನಲ್ ಬ್ಯಾಂಕಿನ ಷೇರು ಶೇಕಡಾ 5.7 ರಷ್ಟು ಕುಸಿತ ಕಂಡುಬಂದಿದೆ.ಮುಂಬೈ ಮಾರುಕಟೆಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆಯಾಗಿದೆ.

ಆಭರಣ ವಿನ್ಯಾಸಕ ನಿರಾವ್ ಮೋದಿ, 10 ಮಂದಿ ಸಿಬ್ಬಂದಿ ವಿರುದ್ಧ ಶಂಕೆ
ಈ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಭರಣ ವಿನ್ಯಾಸಕ ನಿರಾವ್ ಮೋದಿ ಹಾಗೂ ಬ್ಯಾಂಕಿನ 10 ಮಂದಿ ಸಿಬ್ಬಂದಿ ವಿರುದ್ಧ ಶಂಕೆ ವ್ಯಕ್ತವಾಗಿದೆ.

ಕಳೆದ ವಾರವೂ ಈ ಬ್ಯಾಂಕಿನಲ್ಲಿ ಅವ್ಯವಹಾರದ ವಾಸನೆ ಕೇಳಿಬಂದಿತ್ತು.44 ಮಿಲಿಯನ್ ಡಾಲರ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದೇಶದ  ಶ್ರೀಮಂತ ವ್ಯಾಪಾರಿಗಳಲ್ಲಿ ಒಬ್ಬರಾದ ನಿರಾವ್ ಮೋದಿ ಅವರನ್ನು ವಿಚಾರಣೆ ನಡೆಸಲಾಗಿತ್ತು ಎಂದು ಭಾರತದ ಒಕ್ಕೂಟದ ಏಜೆಂಟರು ತಿಳಿಸಿದ್ದಾರೆ.

ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಯುತ್ತಿದ್ದು, ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಾಗಿದೆ.




SCROLL FOR NEXT