ರೆಡ್ ಮಿ ಮೊಬೈಲ್ 
ವಾಣಿಜ್ಯ

ರೆಡ್ ಮಿ ನೋಟ್ 5, ನೋಟ್ 5 ಪ್ರೊ ಸಂಪೂರ್ಣ ಮೇಕ್ ಇನ್ ಇಂಡಿಯಾ: ಕ್ಸಿಯಾಮಿ

ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧವಾಗಿ ರೆಡ್ ಮಿ ನೋಟ್ 5, ನೋಟ್ 5 ಪ್ರೊ ಮೊಬೈಲ್ ಉತ್ಪಾದನೆ ಸಂಪೂರ್ಣವಾಗಿ ಭಾರತದಲ್ಲೇ ಮಾಡಲಾಗಿದೆ ಎಂದು...

ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧವಾಗಿ ರೆಡ್ ಮಿ ನೋಟ್ 5, ನೋಟ್ 5 ಪ್ರೊ ಮೊಬೈಲ್ ಉತ್ಪಾದನೆ ಸಂಪೂರ್ಣವಾಗಿ ಭಾರತದಲ್ಲೇ ಮಾಡಲಾಗಿದೆ ಎಂದು ಕ್ಸಿಯಾಮಿ ಸಂಸ್ಥೆ ತಿಳಿಸಿದೆ. 
ಆಂಧ್ರಪ್ರದೇಶದ ಶ್ರೀ ಸಿಟಿಯಲ್ಲಿನ ಎರಡು ಯುನಿಟ್ ಗಲ್ಲಿ ಈ ಉತ್ಪಾದನೆಗಳನ್ನು ಮಾಡಲಾಗಿದೆ ಎಂದು ಬುಧವಾರ ಕ್ಸಿಯಾಮಿ ಭಾರತ ಹೇಳಿದೆ. 
ನಮ್ಮ ಇತರ ಉತ್ಪನ್ನಗಳಂತೆಯೇ ಈ ಸಾಧನಗಳು ಶೇ. 100ರಷ್ಟು ಭಾರತದಲ್ಲಿಯೇ ತಯಾರಿಸಲಾಗುತ್ತದೆ. ಈ ಎರಡು ಸಾಧನಗಳು ಉತ್ಪಾದನೆ ಶ್ರೀ ಸಿಟಿಯಲ್ಲಿನ ಎರಡು ಯೂನಿಟ್ ಗಳಲ್ಲಿ ತಯಾರಾಗಿವೆ. ಇನ್ನು ಮುಂದಿನ ದಿನಗಳಲ್ಲಿ ಭಾರತದಲ್ಲಿ ಹಲವು ಉತ್ಪಾದನ ಯೂನಿಟ್ ಪ್ರಾರಂಭಿಸಲಾಗುವುದು ಎಂದು ಕ್ಸಿಯಾಮಿ ಭಾರತದ ವ್ಯವಸ್ಥಾಪಕ ನಿರ್ದೇಶಕ ಮತ್ತು ಜಾಗತಿಕ ಉಪಾಧ್ಯಕ್ಷ ಮನೋಜ್ ಕುಮಾರ್ ಜೈನ್ ತಿಳಿಸಿದ್ದಾರೆ. 
ದೇಶದಲ್ಲಿ ಇನ್ನು ಹೆಚ್ಚಿನ ಉತ್ಪಾದನೆ ಯೂನಿಟ್ ಗಳನ್ನು ಪ್ರಾರಂಭಿಸುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದೇವೆ ಎಂದು ಜೈನ್ ತಿಳಿಸಿದ್ದಾರೆ. 
ಫೆಬ್ರವರಿ 22ರಿಂದ ಈ ಎರಡು ರೆಡ್ ಮಿ ನೋಟ್ 5, ನೋಟ್ 5 ಪ್ರೊ ಮೊಬೈಲ್ ಗಳು ಫ್ಲೀಫ್ ಕಾರ್ಟ್ ಮತ್ತು ಎಂಐ.ಕಾಮ್ ನಲ್ಲಿ ದೊರೆಯಲಿವೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!