ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ 11 ಸಾವಿರ ಕೋಟಿ ರೂಪಯಿಯಲ್ಲ ಬದಲಾಗಿ 12,723 ಕೋಟಿ ರೂಪಾಯಿ ಎಂಬ ಮಾಹಿತಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹಿರಂಗಪಡಿಸಿದೆ.
ವಿವಿಧ ತನಿಖಾ ಸಂಸ್ಥೆಗಳು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಈ ಹಿಂದೆ ಅಂದಾಜಿಸಿದ್ದಕ್ಕಿಂತ 1,323 ಕೋಟಿ ರೂಪಾಯಿ ಹೆಚ್ಚು ಅಂದರೆ ಒಟ್ಟು 12,723 ಕೋಟಿ ರೂಪಾಯಿ ಎಂಬ ಮಾಹಿತಿ ಬಹಿರಂಗವಾಗಿದೆ.
ಬಿಎಸ್ ಇ ಗೆ ಲಿಖಿತ ಮಾಹಿತಿ ನೀಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನಧಿಕೃತ ವಹಿವಾಟುಗಳು ನಡೆದಿರುವ ಮೊತ್ತ 1,300 ಕೋಟಿಯನ್ನೂ ಮೀರಬಹುದು ಎಂದು ಹೇಳಿದ್ದು ಬ್ಯಾಂಕ್ ನ ಷೇರುಗಳು ಶೇ.9 ರಷ್ಟು ಕುಸಿದಿದೆ.