ನಿತಿನ್ ಗಡ್ಕರಿ 
ವಾಣಿಜ್ಯ

ವಾಹನ ರದ್ದು ನೀತಿಗೆ ವಿತ್ತ ಸಚಿವಾಲಯ ಸಮ್ಮತಿ, ಈಗ ಜಿಎಸ್‏ಟಿ ಸಮಿತಿ ಮುಂದೆ

ವಾಯುಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ 15 ವರ್ಷಕ್ಕಿಂತಲೂ ಹಳೆಯ ವಾಹನಗಳ ಸಂಚಾರವನ್ನು ....

ನವದೆಹಲಿ: ವಾಯುಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ 15 ವರ್ಷಕ್ಕಿಂತಲೂ ಹಳೆಯ ವಾಹನಗಳ ಸಂಚಾರವನ್ನು ರದ್ದುಮಾಡುವ ಬಹು ನಿರೀಕ್ಷಿತ ನೀತಿಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದ್ದು ಅದರ ದಾಖಲೆಗಳು ಸರಕು ಮತ್ತು ಸೇವಾ ತೆರಿಗೆ ಮಂಡಳಿಗೆ ಹೋಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ದೇಶದಲ್ಲಿ ವಾಹನಗಳಿಂದ ವಾಯುಮಾಲಿನ್ಯವಾಗುತ್ತಿರುವುದನ್ನು ತಡೆಗಟ್ಟಲು ಹಳೆ ವಾಹನಗಳ ಸಂಚಾರ ರದ್ದು ನೀತಿಯನ್ನು ತರುವುದಾಗಿ ಕೇಂದ್ರ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದರು. ಇದೀಗ ವಾಹನಗಳನ್ನು ತೆಗೆದುಹಾಕುವ ನೀತಿಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಸಂಪುಟ ಟಿಪ್ಪಣಿಯನ್ನು ಸಿದ್ದಪಡಿಸಲಾಗುತ್ತಿದೆ.

ಈ ನೀತಿ ಜಿಎಸ್ ಟಿ ಮಂಡಳಿಗೆ ಹೋಗಲಿದ್ದು ಅಲ್ಲಿ ರಾಜ್ಯಗಳು ಮತ್ತು ಕೇಂದ್ರದಿಂದ ರಿಯಾಯಿತಿ ದರಗಳು ನಿರ್ಧಾರವಾಗುತ್ತವೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುವ ರಿಯಾಯಿತಿ ದರಗಳನ್ನು ಸರಕು ಮತ್ತು ಸೇವಾ ತೆರಿಗೆ ಮಂಡಳಿಗಳು ನಿರ್ಧರಿಸಲಿವೆ.

15 ವರ್ಷಗಳ ಹಳೆಯ ವಾಣಿಜ್ಯ ವಾಹನಗಳ ಸಂಚಾರವನ್ನು ಮೊದಲ ಹಂತದಲ್ಲಿ ತೆಗೆದುಹಾಕಲು ವಾಲ್ಯುಂಟರಿ ವೆಹಿಕಲ್ ಫ್ಲೀಟ್ ಮಾಡರ್ನೈಸೇಷನ್ ಪ್ರೊಗ್ರೆಮ್(ವಿ-ವಿಎಂಪಿ)ಯನ್ನು ಜಾರಿಗೆ ತರಲು ಹೆದ್ದಾರಿ ಸಚಿವಾಲಯ ಉತ್ಸುಕವಾಗಿದೆ.ವಾಹನಗಳಿಂದ ಹೊರಬರುವ ಹೊಗೆಯಿಂದ ಉಂಟಾಗುವ ದಟ್ಟ ವಾಯುಮಾಲಿನ್ಯವನ್ನು ತಡೆಗಟ್ಟಲು ಮತ್ತು ಆಟೊಮೊಬೈಲ್ ಉದ್ಯಮ ಶೇಕಡಾ 22ರಷ್ಟು ವಾರ್ಷಿಕ ಅಭಿವೃದ್ಧಿ ಕಾಣಲು ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಗಡ್ಕರಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ನೀತಿ ಜಾರಿಗೆ ಬಂದ ನಂತರ ಭಾರತ ದೇಶ ಆಟೊಮೊಬೈಲ್ ಉದ್ಯಮದ ಕೇಂದ್ರವಾಗಲಿದ್ದು ವಾಹನಗಳ ಬೆಲೆ ಕೂಡ ಕಡಿಮೆಯಾಗಲಿದೆ. ತೆಗೆದುಹಾಕಿದ ವಾಹನಗಳ ಬಿಡಿಭಾಗಗಳನ್ನು ಆಟೊಭಾಗಗಳ ಉತ್ಪಾದನೆಗೆ ಬಳಸಬಹುದು.

ಇದಕ್ಕೂ ಮುನ್ನ ರಸ್ತೆ, ಹೆದ್ದಾರಿ ಸಚಿವಾಲಯ ವಿ-ವಿಎಂಪಿಗಳ ಪರಿಕಲ್ಪನೆಯನ್ನು ಕಾರ್ಯದರ್ಶಿಗಳ ಸಮಿತಿಗೆ ಕಳುಹಿಸಿದೆ. ವಿ-ವಿಎಂಪಿ ನೀತಿಯಡಿ 28 ದಶಲಕ್ಷ ಹಳೆಯ ವಾಹನಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

ಪ್ರಧಾನ ಮಂತ್ರಿ ಸಚಿವಾಲಯ ಈ ಪ್ರಸ್ತಾವನೆ ಬಗ್ಗೆ ಉತ್ಸುಕವಾಗಿದ್ದು ಒಂದು ಬಾರಿ ಜಾರಿಗೆ ಬಂದ ನಂತರ ಮಾಲಿನ್ಯ ಮಟ್ಟವನ್ನು ಪರೀಕ್ಷಿಸಲಾಗುತ್ತದೆ. 15 ವರ್ಷಕ್ಕೂ ಹಳೆಯ ಭಾರೀ ವಾಹನಗಳಿಂದ ಶೇಕಡಾ 65ರಷ್ಟು ಮಾಲಿನ್ಯ ವಾತಾವರಣದಲ್ಲಿ ಉಂಟಾಗುತ್ತದೆ ಎಂದು ನಂಬಲಾಗಿದೆ.

ಸುಮಾರು 15 ಲಕ್ಷ ಬೆಲೆಬಾಳುವ ಹೊಸ ವಾಣಿಜ್ಯ ವಾಹನಗಳನ್ನು ಖರೀದಿಸುವವರಿಗೆ ಈ ಹಿಂದಿನ ಪ್ರಸ್ತಾವನೆಯಂತೆ  ಅವರ ಹಳೆಯ ವಾಹನಗಳನ್ನು ನೀಡಿದರೆ 5 ಲಕ್ಷ ರೂಪಾಯಿಗಳನ್ನು ಸರ್ಕಾರ ನೀಡಲಿದೆ. ಪ್ರಸ್ತಾವನೆಯನ್ನು ಸ್ವೀಕರಿಸಿದ ನಂತರ 10,000 ಕೋಟಿ ರೂಪಾಯಿ ತೆರಿಗೆ ಸರ್ಕಾರಕ್ಕೆ ಬರಲಿದ್ದು ಆಟೊಮೊಬೈಲ್ ವಲಯಕ್ಕೆ ಉಪಯೋಗವಾಗಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ