ನವದೆಹಲಿ: ಈ ವರ್ಷ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಮತ್ತೊಂದು ಬಹುದೊಡ್ಡ ಒಪ್ಪಂದ ಮಾಡಿಕೊಂಡಿದ್ದು ಇಂಗ್ಲೆಂಡ್ ಮೂಲದ ಎಮ್ ಅಂಡ್ ಸಿ ಪ್ರುಡೆನ್ಷಿಯಲ್ ಜೊತೆಗೆ 690 ದಶಲಕ್ಷ ಡಾಲರ್ ಗುತ್ತಿಗೆಗೆ ಸಹಿ ಹಾಕಿದೆ.
ಟಿಸಿಎಸ್ ಅತ್ಯಂತ ಹೆಚ್ಚು ಮೌಲ್ಯದ ಅಮೆರಿಕಾದ ವಿಮಾ ಕಂಪೆನಿ ಟ್ರಾನ್ಸ್ ಮೆರಿಕಾ ಮತ್ತು ದೂರದರ್ಶನ ದರ ಲೆಕ್ಕಾಚಾರ ಘಟಕ ನೀಲ್ಸನ್ ಮತ್ತು ಬ್ರಿಟನ್ ನ ಚಿಲ್ಲರೆ ಮಾರ್ಕ್ಸ್ ಮತ್ತು ಸ್ಪೆನ್ಸರ್ ಜೊತೆಗೆ ಕಳೆದ ವಾರ 2.1 ಡಾಲರ್ ಶತಕೋಟಿಯ ಗುತ್ತಿಗೆ ಪಡೆದುಕೊಂಡಿತ್ತು.
ನಿನ್ನೆ ಎಂ ಅಂಡ್ ಜಿ ಜೊತೆಗೆ ಮಾಡಿಕೊಂಡ ಒಪ್ಪಂದ ಪ್ರುಡೆನ್ಷಿಯಲ್ ವ್ಯವಹಾರಗಳ ಡಿಜಿಟಲ್ ಸುಧಾರಣೆಗೆ ಮತ್ತು ಗ್ರಾಹಕರಿಗೆ ಅದು ನೀಡುವ ಸೇವೆಗಳನ್ನು ವಿಸ್ತರಿಸಲಿದೆ. ಈ ಒಪ್ಪಂದದ ಮೌಲ್ಯ 10 ವರ್ಷಗಳಲ್ಲಿ 500 ಮಿಲಿಯನ್ ಜಿಬಿಪಿಯನ್ನು ಮೀರಲಿದ್ದು, 40 ಲಕ್ಷ ಗ್ರಾಹಕರ ನೀತಿಗಳನ್ನು ಬೆಂಬಲಿಸಲಿದೆ ಎಂದು ಪ್ರುಡೆನ್ಷಿಯಲ್ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.