ನವದೆಹಲಿ: ಬೇರೆ ದೇಶಗಳಿಗೆ ಹೋಲಿಸಿದರೆ ಸರಕು ಮತ್ತು ಸೇವಾ ತೆರಿಗೆ ಭಾರತದಲ್ಲಿ ಅತ್ಯಲ್ಪ ಅವಧಿಯಲ್ಲೇ ಸ್ಥಿರತೆ ಕಾಯ್ದುಕೊಂಡಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದು, ಮತ್ತೊಮ್ಮೆ ಜಿಎಸ್ ಟಿ ತೆರಿಗೆ ದರವನ್ನು ಪರಿಷ್ಕರಿಸುವ ಸೂಚನೆ ನೀಡಿದ್ದಾರೆ.
ಪರೋಕ್ಷ ತೆರಿಗೆ ವ್ಯವಸ್ಥೆಯ ಕ್ಷೇತ್ರದಲ್ಲಿ ಜಿಎಸ್ ಟಿ ಸಂಪೂರ್ಣ ಬದಲಾವಣೆ ತಂದಿದೆ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಜಿಎಸ್ ಟಿ ಭಾರತದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕವಾಗಿ ಜಾರಿಯಾಗಿ ಮತ್ತಷ್ಟು ಬದಲಾವಣೆ ಸಾಧ್ಯವಾಗಲಿದೆ ಎಂದು ಅಂತಾರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಜೇಟ್ಲಿ ತಿಳಿಸಿದ್ದಾರೆ.
ಪ್ರಸ್ತುತ ಜಿಎಸ್ ಟಿ ಶೇ.5, ಶೇ.12, ಶೇ.28 ರಷ್ಟು ತೆರಿಗೆ ವಿಭಾಗಗಳನ್ನು ಹೊಂದಿದ್ದು, ಹಾನಿಕಾರಕ ಸರಕುಗಳು ಹಾಗೂ ವೈಟ್ ಗೂಡ್ಸ್ ಗೆ ಶೇ.28 ರಷ್ಟು ವ್ಯಾಪ್ತಿಗೆ ಬರುತ್ತದೆ. ಕೆಲವು ತಿಂಗಳ ಹಿಂದೆ ನಡೆದ ಪರಿಷ್ಕರಣೆಯಲ್ಲಿ ಕೇಂದ್ರ ಸರ್ಕಾರ 178 ಸರಕುಗಳ ತೆರಿಗೆಯನ್ನು ಶೇ.28 ರಿಂದ ಶೇ.18 ಕ್ಕೆ ಇಳಿಸಿತ್ತು. ಇದರಿಂದಾಗಿ ಜಿಎಸ್ ಟಿ ತೆರಿಗೆ ಸಂಗ್ರಹ ಕುಸಿದಿತ್ತಾದರೂ ನಂತರದ ತಿಂಗಳುಗಳಲ್ಲಿ ಚೇತರಿಕೆ ಕಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics