ಸಂಗ್ರಹ ಚಿತ್ರ 
ವಾಣಿಜ್ಯ

ಆರ್‌ಬಿಐ ನಿಂದ 100 ರೂ. ಹೊಸ ನೋಟು ಶೀಘ್ರ; ವಿಶೇಷತೆಗಳೇನು ಗೊತ್ತೆ?

ಮಹಾತ್ಮಾ ಗಾಂಧಿ ಸರಣಿಯ 100 ರೂ. ಹೊಸ ನೋಟನ್ನು ಬಿಡುಗಡೆ ಮಾಡಲು ಆರ್‌ಬಿಐ ಸಿದ್ದವಾಗಿದೆ. ಹೊಸ ವಿನ್ಯಾಸದೊಡನೆ ನೇರಳೆ ಬಣ್ಣದ ಹೊಸ ನೋಟು ಶೀಘ್ರವೇ ಚಲಾವಣೆಗೆ ಬರಲಿದೆ.

ಮುಂಬೈ: ಮಹಾತ್ಮಾ ಗಾಂಧಿ ಸರಣಿಯ 100 ರೂ. ಹೊಸ ನೋಟನ್ನು ಬಿಡುಗಡೆ ಮಾಡಲು ಆರ್‌ಬಿಐ ಸಿದ್ದವಾಗಿದೆ. ಹೊಸ ವಿನ್ಯಾಸದೊಡನೆ ನೇರಳೆ ಬಣ್ಣದ ಹೊಸ ನೋಟು ಶೀಘ್ರವೇ ಚಲಾವಣೆಗೆ ಬರಲಿದೆ.
ರಿಸರ್ವ್ ಬ್ಯಾಂಕ್ ಇದಾಗಲೇ ಹೊಸ ನೋಟಿನ ಮುದ್ರಣ ಪ್ರಾರಂಭಿಸಿದೆ.ಆಗಸ್ಟ್‌ ಅಥವಾ ಸೆಪ್ಟೆಂಬರ್‌ ತಿಂಗಳಲ್ಲಿ ಇದು ಜನರ ಬಳಕೆಗೆ ದೊರೆಯಲಿದೆ.
ಮಧ್ಯ ಪ್ರದೇಶದ ದೇವಸ್‌ ಮುದ್ರಣಾಲಯದಲ್ಲಿ ಈ ನೋಟು ಮುದ್ರಣ ಕಾರ್ಯ ನಡೆದಿದ್ದು ಇದನ್ನು ಮುದ್ರಿಸಲು ಸ್ವದೇಶೀ ಇಂಕನ್ನೇ ಬಳಸಲಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ. 
ಇನ್ನು ಹೊಸ 100 ರೂ. ನೋಟು ಚಲಾವಣೆಗೆ ಬಂದ ನಂತರವೂ ಹಳೆಯ ನೋಟನ್ನು ಹಿಂಪಡೆಯುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. 
ಹೊಸ ನೋಟು ಈಗ ಬಳಕೆಯಲ್ಲಿರುವ ನೋಟಿಗಿಂತ ಗಾತ್ರದಲ್ಲಿ ಚಿಕ್ಕದಾಗಿರಲಿದೆ. ಇದು 10 ರು. ಹೊಸ ನೋಟಿಗಿಂತ ತುಸು ದೊಡ್ಡ ಗಾತ್ರ ಹೊಂದಿರಲಿದೆ.  ನೋಟಿನ ಹಿಂಭಾಗದಲ್ಲಿ  ಗುಜರಾತ್‌ನ ಪಠಾಣ್‌ ನಗರದಲ್ಲಿನ ಇತಿಹಾಸ ಪ್ರಸಿದ್ಧ 'ರಾಣಿ ಕಿ ವಾವ್‌'ನ ಚಿತ್ರವಿದೆ. ಇದೇ ವೇಳೆ ಹೊಸ ನೋಟಿನ ಗಾತ್ರಕ್ಕೆ ಸಮನಾಗಿ ದೇಶದ ಎಟಿಎಂಗಳನ್ನು ಬದಲಾವಣೆ ಮಾಡಬೇಕಾಗಿದೆ ಎಂದು ಮಾದ್ಯಮ ಪ್ರಕಟಣೆಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!